ಯಕ್ಷಗಾನ ಕಲಾವಿದ ಪೇತ್ರಿ ಬಾಲಕೃಷ್ಣ ನಾಯಕ್ ನಿಧನ
ಉಡುಪಿ: ಹಿರಿಯ ಯಕ್ಷಗಾನ ಕಲಾವಿದ ಪೇತ್ರಿ ಬಾಲಕೃಷ್ಣ ನಾಯಕ್ (59 ವರ್ಷ) ಅಲ್ಪಕಾಲದ ಅಸೌಖ್ಯದಿಂದ ಇಂದು (21-12-2023) ನಿಧನ ಹೊಂದಿದರು.
ಎಲ್ಲಾ ಬಗೆಯ ವೇಷಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದ ಇವರು ಪಾರಂಪರಿಕ ಹೆಜ್ಜೆಗಾರಿಕೆ ಹಾಗೂ ಮಾತುಗಾರಿಕೆಗೆ ಖ್ಯಾತರಾಗಿದ್ದರು.
ಮಾಣಕಟ್ಟೆ, ಕಳವಾಡಿ, ಅಮೃತೇಶ್ವರಿ, ಮಂದಾರ್ತಿ, ಹಾಲಾಡಿ, ಮೇಗರವಳ್ಳಿ, ಮಡಾಮಕ್ಕಿ ಹಾಗೂ ಹಿರಿಯಡ್ಕ ಮೇಳ ಸೇರಿದಂತೆ ಸುಮಾರು ಮೂರೂವರೆ ದಶಕಗಳ ಕಾಲ ಯಕ್ಷಗಾನ ಕಲಾಸೇವೆಗೈದಿದ್ದಾರೆ.
ಇವರು ಓರ್ವ ಉತ್ತಮ ಪ್ರಸಾಧನ ತಜ್ಞರೂ ಆಗಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಯಕ್ಷನಿಧಿಯ ಸದಸ್ಯರಾಗಿದ್ದ ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.