Saturday, January 18, 2025
Homeಸುದ್ದಿದೇರಾಜೆ ಸೀತಾರಾಮಯ್ಯ ನೆನಪು ನೂರೆಂಟು (ದೇರಾಜೆ ಸಂಸ್ಮರಣ ಗ್ರಂಥ)

ದೇರಾಜೆ ಸೀತಾರಾಮಯ್ಯ ನೆನಪು ನೂರೆಂಟು (ದೇರಾಜೆ ಸಂಸ್ಮರಣ ಗ್ರಂಥ)

‘ರಸಋಷಿ’ ಎಂದೇ ಖ್ಯಾತರಾದ ದೇರಾಜೆ ಸೀತಾರಾಮಯ್ಯನವರನ್ನು ನಾವೆಲ್ಲರೂ ತಿಳಿದಿದ್ದೇವೆ. ಕನ್ನಡ ಸಾರಸ್ವತ ಲೋಕಕ್ಕೆ ಅವರ ಕೊಡುಗೆಗಳು ಅನುಪಮವಾದುವು. ಅವರು ರಚಿಸಿದ ‘ಶ್ರೀರಾಮಚರಿತಾಮೃತಂ’ ಮತ್ತು ‘ಶ್ರೀಮನ್ಮಹಾಭಾರತ ಕಥಾಮೃತಂ’ ಎಂಬ ಎರಡು ಕೃತಿಗಳು ಖ್ಯಾತಿಯನ್ನು ಪಡೆದಿವೆ. ಆಕರ ಗ್ರಂಥಗಳಾಗಿ ಪರಿಣಮಿಸಿವೆ. ಓದುಗರ ಕೈಯಲ್ಲಿ ಇರಲೇಬೇಕಾದ ಕೃತಿಗಳಿವು.

ಕವಿಯಾಗಿ, ಯಕ್ಷಗಾನ ತಾಳಮದ್ದಳೆ ಅರ್ಥಧಾರಿಯಾಗಿ, ಸಮಾಜಸೇವಕರಾಗಿ ಶ್ರೀಯುತರು ಖ್ಯಾತರು. ಇವರ ಕುರಿತಾದ ಸಂಸ್ಮರಣ ಗ್ರಂಥ ‘ ದೇರಾಜೆ ಸೀತಾರಾಮಯ್ಯ ನೆನಪು ನೂರೆಂಟು’ ಎಂಬ ಈ ಕೃತಿಯು ಇತ್ತೀಚಿಗೆ ಎಡನೀರು ಮಠದಲ್ಲಿ ಬಿಡುಗಡೆಗೊಂಡು ಓದುಗರ ಕೈಸೇರಿತು.

ಈ ಕೃತಿಯ ಪ್ರಕಾಶಕರು ದೇರಾಜೆ ಸೀತಾರಾಮಯ್ಯ ಸಂಸ್ಮರಣ ಸಮಿತಿ, ‘ಗೋಕುಲ’, ಲಕ್ಷ್ಮೀನಗರ, ಬಿಜೈ, ಮಂಗಳೂರು. ಈ ಸಮಿತಿಯ ಅಧ್ಯಕ್ಷರು ಶ್ರೀ ಜಿ.ಕೆ. ಭಟ್ ಸೇರಾಜೆ. ಆರುನೂರ ಅರುವತ್ತೆಂಟು ಪುಟಗಳನ್ನು ಹೊಂದಿದ ಈ ಪುಸ್ತಕದ ಬೆಲೆ ರೂಪಾಯಿ 950/-.

ಈ ಕೃತಿಯ ಸಂಪಾದಕರು ಶ್ರೀ ಕೆ. ಶ್ರೀಕರ ಭಟ್ ಮರಾಠೆ, ಜೆ.ಕೆ ಭಟ್ ಸೇರಾಜೆ, ಎಸ್. ಎನ್. ಪಂಜಾಜೆ, ಮೂರ್ತಿ ದೇರಾಜೆ ಮತ್ತು ಇಂದಿರಾಜಾನಕಿ ಎಸ್. ಶರ್ಮ.  ದೇರಾಜೆಯವರನ್ನು ಮಹನೀಯರು ಮೆಚ್ಚಿಕೊಂಡ ಬಗೆಯನ್ನು ಈ ಪುಸ್ತಕದಲ್ಲಿ ತಿಳಿಸಲಾಗಿದೆ. ಖ್ಯಾತ ಬರಹಗಾರರು ದೇರಾಜೆಯವರ ಬಗೆಗೆ ಬರೆದ 221 ಲೇಖನಗಳು ಈ ಕೃತಿಯಲ್ಲಿ ಇವೆ.

ದೇರಾಜೆ ಸೀತಾರಾಮಯ್ಯನವರು ಬರೆದ ಕೃತಿಗಳು, ಲೇಖನಗಳು, ದೇರಾಜೆ ಸ್ಮೃತಿ ಗೌರವ, ದೇರಾಜೆ ನೆನಪು ಕಾರ್ಯಕ್ರಮಗಳು, ದೇರಾಜೆ ಸೀತಾರಾಮಯ್ಯನವರ ಜೀವನದ ಪ್ರಮುಖ ಘಟನೆಗಳ ವಿವರಗಳನ್ನೂ ನೀಡಿರುತ್ತಾರೆ. ಫೋಟೋ ಆಲ್ಬಮ್ ಕೂಡಾ ಇದೆ.

ಈ ಕೃತಿಯ ವಿತರಕರು ಜ್ಞಾನಗಂಗಾ ಪ್ರಕಾಶನ, ಪುತ್ತೂರು. ಫೋನ್ ನಂಬರ್ 9480451560 ಮತ್ತು 9663964631. ಈ ಶ್ರೇಷ್ಠ ಕೃತಿಗೆ ಶುಭಾಶಯಗಳು. 

ಕೃತಿ ಪರಿಚಯ: ಶ್ರೀ ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments