ನಾಳೆ (ಡಿಸೆಂಬರ್ 9) ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪವಿತ್ರವಾದ ಮತ್ತು ಸರ್ವರೋಗ ನಿವಾರಕ ಎಂದು ನಂಬಲಾದ ‘ಮೂಲಮೃತ್ತಿಕಾ ಪ್ರಸಾದ’ ತೆಗೆಯುವ ಮತ್ತು ವಿತರಿಸುವ ಕಾರ್ಯಕ್ರಮ ನಡೆಯಲಿದೆ. ಆನಂತರ ಭಕ್ತಾದಿಗಳಿಗೆ ಮೂಲಮೃತ್ತಿಕಾ ಪ್ರಸಾದ ವಿತರಣೆಯೂ ನಡೆಯಲಿದೆ.
ಡಿಸೆಂಬರ್ 9ರ ಶನಿವಾರ ‘ಮೂಲಮೃತ್ತಿಕಾ ಪ್ರಸಾದ’ ತೆಗೆಯುವ ಕಾರ್ಯಕ್ಕೆ ಚಾಲನೆ ದೊರೆಯಲಿದೆ. ನಾಳೆ ಪ್ರಸಾದವನ್ನು ಭಕ್ತಾದಿಗಳಿಗೆ ವಿತರಣೆ ಮಾಡಲಾಗುವುದು. ದೇವಸ್ಥಾನದಲ್ಲಿ ಮೂಲಮೃತ್ತಿಕಾ ಪ್ರಸಾದ ತೆಗೆಯುವ ಪುಣ್ಯಕಾರ್ಯಕ್ರಮ ಇರುವುದರಿಂದ ಆ ದಿನ ಅಂದರೆ ನಾಳೆ ಬೆಳಗ್ಗಿನಿಂದ ಮಧ್ಯಾಹ್ನ 2 ಘಂಟೆಯವರೆಗೆ ದೇವರ ದರ್ಶನ ಮತ್ತು ಇತರ ಸೇವೆಗಳಿಗೆ ಅವಕಾಶ ಇರುವುದಿಲ್ಲ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
ಅತ್ಯಂತ ಪುರಾತನವಾದ ಕುಕ್ಕೆ ಸನ್ನಿಧಿಯಲ್ಲಿ ಈ ಪ್ರಸಾದವನ್ನು ವರ್ಷಕ್ಕೊಂದು ಬಾರಿ ಮಾತ್ರ ತೆಗೆಯಲಾಗುವುದು. ಅದೂ ಈ ಜಾತ್ರಾ ಸಮಯದಲ್ಲಿ ಮಾತ್ರ.
‘ಮೂಲಮೃತ್ತಿಕಾ ಪ್ರಸಾದ’ಕ್ಕೆ ಅತ್ಯಂತ ವಿಶೇಷತೆ ಹಾಗೂ ಮಹತ್ವವಿದೆ. ‘ಮೂಲಮೃತ್ತಿಕಾ ಪ್ರಸಾದ’ ಎಂದರೆ ನಾಗದೇವರ ಹುತ್ತದಿಂದ ತೆಗೆಯುವ ಮಣ್ಣು. ಮೃತ್ತಿಕಾ ಎಂದರೆ ಭೂಮಿತಾಯಿ, ಭೂಮಿ ಅಥವಾ ಮಣ್ಣು ಎಂದರ್ಥ. ಹುತ್ತದಿಂದ ತೆಗೆಯುವ ಮಣ್ಣು ಆದ್ದರಿಂದ ಈ ಹೆಸರು ಬಂದಿದೆ.
ಇದು ಅತ್ಯಂತ ಪಾವಿತ್ರ್ಯತೆಯನ್ನು ಹೊಂದಿದ ನಾಗದೇವರ ಪ್ರಸಾದವಾಗಿರುತ್ತದೆ. ಈ ಪ್ರಸಾದವು ಹಲವು ರೋಗಗಳನ್ನು ಗುಣಪಡಿಸುವ ಔಷಧೀಯ ಗುಣವುಳ್ಳ ಹುತ್ತದ ಪ್ರಸಾದ. ಸಂತಾನಹೀನತೆ, ಚರ್ಮರೋಗ ಮೊದಲಾದ ಹಲವು ವ್ಯಾಧಿಗಳಿಗೆ ಈ ಪ್ರಸಾದವು ಒಂದು ದಿವ್ಯ ಔಷಧಿಯಾಗಿ ಪರಿಣಮಿಸುತ್ತದೆ ಎಂದು ಶ್ರೀ ಕ್ಷೇತ್ರದ ಅಸಂಖ್ಯ ಭಕ್ತರ ನಂಬಿಕೆ ಮತ್ತು ಅನಿಸಿಕೆಯಾಗಿದೆ. ಈ ಮೂಲಪ್ರಸಾದವನ್ನು ಲಕ್ಷಾಂತರ ಜನರು ಸ್ವೀಕರಿಸಿ, ಸೇವಿಸಿ ಅದರಿಂದ ಹಲವಾರು ರೋಗಗಳಿಗೆ ಪರಿಹಾರವನ್ನು ಕಂಡುಕೊಂಡಿದ್ದಾರೆ.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions