ಪಳ್ಳಿ ಸೋಮನಾಥ ಹೆಗ್ಡೆ ಪ್ರಶಸ್ತಿ ಪ್ರದಾನ
ಕಲೆ ನಿಂತ ನೀರಲ್ಲ ಕಾಲಗತಿಯೊಂದಿಗೆ ನಿರಂತರ ಪರಿಷ್ಕರಣೆಗೊಳ್ಳುತ್ತಿರುತ್ತದೆ. ಆದರೆ ಕಲೆಯ ಅಂತಸತ್ತ್ವದ ಅರಿವು ಕಲಾವಿದನಿಗಿರಬೇಕಾಗುತ್ತದೆ. ಕಲೆಯನ್ನೆ ಬದುಕಾಗಿಸಿಕೊಂಡವರು ಇದನ್ನು ಅರ್ಥೈಸಿ ಕೊಳ್ಳುವುದು ಒಳಿತು. ಯಾವುದೇ ಕಲಾವಿದನಿಗಿಂತ ಯಕ್ಷಗಾನ ಕಲೆ ಮತ್ತು ಮೇಳ ಶ್ರೇಷ್ಠ. ನನ್ನ ಐದು ದಶಕದ ಕಲಾಯಾನದಲ್ಲಿ ಮುವತ್ತನಾಲ್ಕು ವರ್ಷ ಶ್ರೀ ಸಾಲಿಗ್ರಾಮ ಮೇಳದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ
ಅದಕ್ಕೆ ಅವಕಾಶ ಮಾಡಿಕೊಟ್ಟ ಅಂದಿನ ಮತ್ತು ಇಂದಿನ ಯಜಮಾನರಿಗೆ ನಾನು ಆಭಾರಿ ಎಂದು ಹಿರಿಯ ಕಲಾವಿದ ಬಳ್ಕೂರು ಕೃಷ್ಣ ಯಾಜಿ ನುಡಿದರು.
ಅವರು ಶುಕ್ರವಾರ ಗುರುಪ್ರಸಾದಿತ ಯಕ್ಷಗಾನ ಮಂಡಳಿಯ ಐವತ್ತಾರನೆ ವರ್ಷದ ತಿರುಗಾಟದ ಪ್ರಥಮ ದೇವರ ಸೇವೆ ಆಟದ ರಂಗದಲ್ಲಿ ಹಮ್ಮಿಕೊಂಡ ಇಪ್ಪತ್ತನೇ ವರ್ಷದ ಪಳ್ಳಿ ಸೋಮನಾಥ ಹೆಗ್ಡೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಉಡುಪಿ ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ ಶೆಟ್ಟಿ ಮಾತನಾಡಿ ಇಂದು ಕಲೆ ಕಲಾವಿದರಿಗೆ ಅವಕಾಶಗಳ ಕೊರತೆ ಇಲ್ಲ ಆದರೆ ಈ ಸಂಕ್ರಮಣದ ಕಾಲಘಟ್ಟದಲ್ಲಿ ಟೆಂಟ್ ಮೇಳ ನಡೆಸುವುದು ಸವಾಲಿನ ಕೆಲಸ. ಆದರೆ ಸಾಲಿಗ್ರಾಮ ಮೇಳ ಐವತ್ತೈದು ವರ್ಷಗಳನ್ನು ಪೂರೈಸಿ ಮುಂದಿನ ತಿರುಗಾಟಕ್ಕೆ ಅಣಿಯಾಗುತ್ತಿರುವುದು ಪ್ರಶಂಸನೀಯ ಎಂದು ಶುಭ ಹಾರೈಸಿದರು.
ಸಭಾಧ್ಯಕ್ಷತೆಯನ್ನು ವಹಿಸಿದ ಸಾಲಿಗ್ರಾಮ ಗುರುನರಸಿಂಹ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಕೆ.ಎಸ್. ಕಾರಂತ ಮಾತನಾಡಿ ನಮ್ಮೂರಿನ ಇತಿಹಾಸ ಪ್ರಸಿದ್ಧ ಮೇಳವಾದ ಸಾಲಿಗ್ರಾಮ ಮೇಳ ಯಶಸ್ವಿಯಾಗಿ ತಿರುಗಾಟ ಮುಂದುವರಿಸಲು ಯಜಮಾನರು ಕಲಾವಿದರು ಮಾತ್ರವಲ್ಲದೆ ಯಕ್ಷಾಭಿಮಾನಿಗಳೂ ಶ್ರಮಿಸಬೇಕು.
ದೇವಸ್ಥಾನದ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ಅಲ್ಕದೇ ಮೇಳದಲ್ಲಿ ಸುಧೀರ್ಘ ಕಾಲ ಸೇವೆ ಸಲ್ಲಿಸಿದ ಕಲಾವಿದರಿಗೆ ಪ್ರಶಸ್ತಿ ನೀಡಿ ಗೌರವಿಸುವುದು ಮಾದರಿ ಕೆಲಸ ಎಂದು ನುಡಿದರು.
ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಮಾಜಿ ಅಧ್ಯಕ್ಷ ಐರೋಡಿ ಜಗದೀಶ ಕಾರಂತ ಅಭಿನಂದನಾ ನುಡಿಗಳನ್ನಾಡಿದ ಪ್ರೊ. ಎಸ್. ವಿ. ಉದಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಮೇಳದ ಯಜಮಾನ ಪಳ್ಳಿ ಕಿಶನ್ ಹೆಗ್ಡೆ ಕೃತಜ್ಞತೆ ಸಲ್ಲಿಸಿದರು ಉಪನ್ಯಾಸಕ ರಾಘವೇಂದ್ರ ತುಂಗ ಸ್ವಾಗತಿಸಿ ನಿರೂಪಿಸಿದರು ಯಕ್ಷ ಸಂಘಟಕ ಸುದರ್ಶನ ಉರಾಳ ಯಕ್ಷ ಕವಿ ನಂದೀಶ ಶೆಟ್ಟಿ ಸಹಕರಿಸಿದರು
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions