Monday, November 25, 2024
Homeಸುದ್ದಿದೇರಾಜೆ ಸಂಸ್ಮರಣ ಗ್ರಂಥ ಮತ್ತು ಅಭಿನಂದನಾ ಗ್ರಂಥ ಲೋಕಾರ್ಪಣೆ ಹಾಗೂ ದೇರಾಜೆ ಸಂಸ್ಮರಣೆ

ದೇರಾಜೆ ಸಂಸ್ಮರಣ ಗ್ರಂಥ ಮತ್ತು ಅಭಿನಂದನಾ ಗ್ರಂಥ ಲೋಕಾರ್ಪಣೆ ಹಾಗೂ ದೇರಾಜೆ ಸಂಸ್ಮರಣೆ

ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಂ, ಶ್ರೀಮತ್ ಎಡನೀರು ಮಠದ ಆಶ್ರಯದಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು ದಿನಾಂಕ 14.11.2023ನೇ ಮಂಗಳವಾರ ಅಪರಾಹ್ನ 2 ಗಂಟೆಗೆ ದೇರಾಜೆ ಸೀತಾರಾಮಯ್ಯ ಸಂಸ್ಮರಣ ಸಮಿತಿಯವರು
ಸಂಪಾದಿಸಿದ “ದೇರಾಜೆ ಸೀತಾರಾಮಯ್ಯ ನೆನಪು ನೂರೆಂಟು ” ( ಸಂಸ್ಮರಣ ಗ್ರಂಥ) ಮತ್ತು ” ರಸಋಷಿ ” (ಅಭಿನಂದನಾ ಗ್ರಂಥದ ದ್ವಿತೀಯ ಮುದ್ರಣ) ಈ ಗ್ರಂಥಗಳನ್ನು
ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಶ್ರೀ ಮಠದಲ್ಲಿ ಲೋಕಾರ್ಪಣೆಗೊಳಿಸಲಿದ್ದಾರೆ.


ಸಭಾಧ್ಯಕ್ಷತೆಯನ್ನು ಡಾ..ಟಿ.ಶ್ಯಾಮ್ ಭಟ್,IAS, ಮಾಜೀ ಅಧ್ಯಕ್ಷರು- ಕೆ.ಪಿ.ಎಸ್.ಇ. ಇವರು ವಹಿಸಲಿದ್ದಾರೆ.
ಪ್ರಸಿದ್ಧ ಅರ್ಥಧಾರಿ ಶ್ರೀ ಉಡುವೇಕೋಡಿ ಸುಬ್ಬಪ್ಪಯ್ಯನವರು
ದೇರಾಜೆ ಸಂಸ್ಮರಣೆ ಮಾಡಲಿದ್ದಾರೆ.

ಈ ಮಹತ್ವದ ಗ್ರಂಥದಲ್ಲಿ ಪ್ರಖ್ಯಾತ ಸಾಹಿತಿಗಳು, ಪ್ರಸಿದ್ಧ ಯಕ್ಷಗಾನ ಕಲಾವಿದರೂ, ದೇರಾಜೆಯವರ ಗೆಳೆಯರೂ, ಬಂಧುಗಳೂ, ಮನೆಯವರೂ ಸೇರಿ ಇನ್ನೂರಕ್ಕೂ ಮಿಕ್ಕಿದ ಅಭಿಮಾನಿಗಳು ಬರೆದ ದೇರಾಜೆಯೊಡನಾಟದ ನೆನಪುಗಳು. ದೇರಾಜೆ ಸಂದರ್ಶನಗಳು
ಸುಮಾರು 64 ಪುಟಗಳ ಅಪೂರ್ವ ಫೊಟೊ ಆಲ್ಬಮ್,
ಅಲ್ಲದೇ ಇನ್ನೂ ಅನೇಕ ವಿವರಗಳಿವೆ.


ಇದೊಂದು ಸಂಗ್ರಹ ಯೋಗ್ಯ, ಮೌಲ್ಯಯುತ ಗ್ರಂಥವಾಗಿರುತ್ತದೆ. ಈ ಎರಡು ಪುಸ್ತಕಗಳ ಒಟ್ಟು ಬೆಲೆಯು 1200/-
ರೂಪಾಯಿ ಗಳಾಗಿರುತ್ತದೆ.
(ಪ್ರಕಟಣಾ ಪೂರ್ವ ರೂ.900/-)

ವಿಶೇಷವಾಗಿ ಈ ಕಾರ್ಯಕ್ರಮ ದೊಂದಿಗೆ
ವಿದ್ವಾನ್ ಗಣಪತಿ ಭಟ್ ಮತ್ತು ಎ.ಪಿ.ಪಾಠಕ್ ಅವರ ಹಿಮ್ಮೇಳದೊಂದಿಗೆ
ಶ್ರೀ ದಿವಾಕರ ಹೆಗಡೆಯವರಿಂದ ಏಕವ್ಯಕ್ತಿ ಯಕ್ಷಗಾನ ತಾಳಮದ್ದಲೆ ಜರಗಲಿದೆ.


ಎಲ್ಲಾ ಕಲಾಸಕ್ತ ಸಾಹಿತ್ಯಾಸಕ್ತ ಬಂಧುಗಳು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಸಿರಿಬಾಗಿಲು ಪ್ರತಿಷ್ಠಾನ ಮತ್ತು ದೇರಾಜೆ ಸಂಸ್ಮರಣಾ ಸಮಿತಿಯು ವಿನಂತಿಸುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments