ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ್: ವಿದ್ಯಾಭಾರತಿ ಕರ್ನಾಟಕ:
ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆ:
ವಿವೇಕಾನಂದ ಆಂಗ್ಲ ಮಾಧ್ಯಮ ವಿದ್ಯಾರ್ಥಿನಿ ಅಭಿಜ್ಞಾ ಶಾಂಭವಿ ಎಸ್.ಜಿ.ಎಫ್.ಐಗೆ ಆಯ್ಕೆ



ವಿದ್ಯಾಭಾರತಿ ಸಂಯೋಜಿತ ಶಾಲೆಗಳ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯು ದಿನಾಂಕ ಒಕ್ಟೋಬರ್ 28,29, 30 ರಂದು ಮಧ್ಯಪ್ರದೇಶದ ದೇವಾಸ್‍ನಲ್ಲಿ ನಡೆಯಿತು. ಈ ಸ್ಪರ್ದೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ.
ಬಾಲವರ್ಗದ ಬಾಲಕಿಯರ ವಿಭಾಗದಲ್ಲಿ:(14ರ ವಯೋಮಾನದ) ಅಭಿಜ್ಞಾ ಶಾಂಭವಿ, 6ನೇ ತರಗತಿ(ಶ್ರೀ ಸುಧೀರ್ ಮತ್ತು ಶ್ರೀಮತಿ ಲತಾ ದಂಪತಿ ಪುತ್ರಿ) –ಪ್ರಥಮ ಸ್ಥಾನ ದೊಂದಿಗೆ ಚಿನ್ನ ಪದಕ, ಮಹತಿ, 6ನೇ ತರಗತಿ(ಶ್ರೀ ಶಿವರಂಜನ್.ಎಂ ಮತ್ತು ಶ್ರೀಮತಿ ಲಾವಣ್ಯ ಭಟ್ ದಂಪತಿ ಪುತ್ರಿ)- ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಪಡೆದಿರುತ್ತಾಳೆ.
ಕಿಶೋರ ವರ್ಗದ ಬಾಲಕರ ವಿಭಾಗದಲ್ಲಿ (17ರ ವಯೋಮಾನದ) – ಪ್ರಮಥ.ಎಂ.ಭಟ್, 10ನೇ ತರಗತಿ(ಶ್ರೀ ರವಿನಾರಾಯಣ.ಎಂ ಮತ್ತು ಶ್ರೀಮತಿ ಶರಾವತಿ ದಂಪತಿ ಪುತ್ರ) – ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಪಡೆದಿರುತ್ತಾನೆ.
ಪ್ರಥಮ ಸ್ಥಾನ ಪಡೆದ ಅಭಿಜ್ಞಾ ಶಾಂಭವಿ ಎಸ್.ಜಿ.ಎಫ್.ಐ ಗೆ ಆಯ್ಕೆಯಾಗಿರುತ್ತಾಳೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಶಾಲಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ