ಸಾಂಸ್ಕೃತಿಕ ಕ್ಷೇತ್ರದಲ್ಲಿ ಜನಪ್ರಿಯವಾದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ನೇತೃತ್ವದಲ್ಲಿ ಕಾಸರಗೋಡಿನ ನಾಗರಿಕರಿಗಾಗಿ- ಕಲಾವಿದರಿಗಾಗಿ, ಕೆ.ಯಂ.ಸಿ.ಹಾಸ್ಪಿಟಲ್, ಅತ್ತಾವರ, ಮಂಗಳೂರು ಇವರಿಂದ ಪ್ರಸಿದ್ದ ವೈದ್ಯರುಗಳ ನೇತೃತ್ವದಲ್ಲಿ ಉಚಿತವಾಗಿ ವೈದ್ಯಕೀಯ ತಪಾಸಣೆ ಸೆಪ್ಟೆಂಬರ್ 10 ರಂದು ಆದಿತ್ಯವಾರ ಬೆಳಗ್ಗೆ 9 ಗಂಟೆಯಿಂದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದೆ. ಪ್ರತಿಷ್ಠಾನದ ವತಿಯಿಂದ ಉಚಿತವಾಗಿ ಕನ್ನಡದ ನೀಡಲಾಗುವುದು.
ಈ ಕಾರ್ಯಕ್ರಮವನ್ನು ಕಾಸರಗೋಡಿನ ಹಿರಿಯ ವೈದ್ಯರಾದ ಡಾ. ಬಿ.ಯಸ್. ರಾವ್ ಅವರು ಉಧ್ಘಾಟಿಸಲಿರುವರು. ಶ್ರೀ ಗೋಪಾಲಕೃಷ್ಣ ಅಧ್ಯಕ್ಷರು ಮಧೂರು ಪಂಚಾಯತ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಕೆ.ಯಂ.ಸಿ. ಯ ಪ್ರಸಿದ್ದ ವೈದ್ಯರಾದ ಹೃದಯ ರೋಗ ತಜ್ಞ ಡಾ.ಪದ್ಮನಾಭ ಕಾಮತ್, ಮಣಿಪಾಲ ಕೆ.ಯಂ.ಸಿ.ಯ ಶ್ರೀಮತಿ ಶೈಲಜಾ, ನೇತ್ರ ತಜ್ಞರು, ಹಾಗು ಕ್ಯಾನ್ಸರ್ ತಜ್ಞರಾದ ಡಾ.ಅಭಿಷೇಕ್ ಕೃಷ್ಣ ಭಾಗವಹಿಸಲಿದ್ದಾರೆ. ಡಾ.ನಾರಾಯಣ ಮಧೂರು,ಡಾ.ರಾಜಾರಾಮ ಭಟ್ ದೇವಕಾನ ರವರ ಉಪಸ್ಥಿತಿಯಲ್ಲಿ ಕೆ.ಯಂ.ಸಿ.ಯ 10 ಕ್ಕೂ ಹೆಚ್ಚು ವೈದ್ಯರು ಭಾಗವಹಿಸಲಿದ್ದಾರೆ.
ಹೃದಯ ರೋಗ ವಿಭಾಗ, ಸಾಮಾನ್ಯ ರೋಗ ವಿಭಾಗ, ಎಲುಬು ಮತ್ತು ಕೀಲು ರೋಗ, ಕಿವಿ.ಮೂಗು ,ಗಂಟಲು ವಿಭಾಗ, ಕಣ್ಣಿನ ವಿಭಾಗ, ಚರ್ಮ ರೋಗ ತಪಾಸಣೆ, ಕ್ಯಾನ್ಸರ್ ತಪಾಸಣೆ ಮತ್ತು ಮಾಹಿತಿ
ನಡೆಯಲಿರುವುದುನಡೆಯಲಿರುವುದುನಡೆಯಲಿರುವುದುನಡೆಯಲಿರುವುದು,ಅಲ್ಲದೆ ಅಗತ್ಯ ಇರುವ ಮೆಡಿಸಿನ್ ಸ್ಥಳದಲ್ಲಿ ಲಭ್ಯ ವಿರುತ್ತದೆ.
Kmc ಆರೋಗ್ಯ ಕಾರ್ಡು ಮತ್ತು ಲಾಯಲ್ಟಿ ಕಾರ್ಡ್ ನೋಂದಾವಣೆಯೂ ಈ ಸಂದರ್ಭದಲ್ಲಿ ನಡೆಯಲಿದೆ. ಇದರಿಂದಾಗಿ Rs.35000 ವರೆಗಿನ ಆರೋಗ್ಯ ವಿಮೆ ಸೌಲಭ್ಯ ವು ಫಲಾನುಭವಿಗಳಿಗೆ ದೊರೆಯುತ್ತದೆ.
ಮೊದಲಾಗಿ ಟೋಕನ್ ಅಪೇಕ್ಷೆ ಇದ್ದವರು ತಾರೀಕು 7,8,9 ರಂದು ಸಂಜೆ 5 ಗಂಟೆ ನಂತರ ಫೋನ್ ಮುಖಾಂತರ ( 9448344380, 8073740237, 8547463158)ಸಂಪರ್ಕಿಸಬೇಕೆಂದು ಪ್ರತಿಷ್ಠಾನವು ಪ್ರಕಟಣೆಯ ಮೂಲಕ ತಿಳಿಸಿದೆ.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions