Wednesday, June 26, 2024
Homeಸುದ್ದಿವಿವೇಕಾನಂದ ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ

ವಿವೇಕಾನಂದ ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ

ವಿದ್ಯಾಭಾರತಿ ಜ್ಞಾನವಿಜ್ಞಾನ ಮೇಳ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸ್ಪರ್ಧೆಗಳು ಆಗಸ್ಟ್ 26ರಂದು ತೆಂಕಿಲದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆಯಿತು. ಈ ಸ್ಪರ್ಧೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇಲ್ಲಿನ ವಿದ್ಯಾರ್ಥಿಗಳು ಭಾಗವಹಿಸಿ ಅನೇಕ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಶಿಶು ವರ್ಗ ವಿಭಾಗ:

ವಿಜ್ಞಾನ ಪ್ರಯೋಗದಲ್ಲಿ 5 ನೇ ತರಗತಿಯ ಅಭೀಷ್ಠ ಶಂಕರ ಶರ್ಮ ( ಶ್ರೀ ಸತ್ಯಶಂಕರ ಹಾಗೂ ಶ್ರೀಮತಿ ಹೇಮಾ ದೀಪಿಕಾ ದಂಪತಿ ಪುತ್ರ) ಪ್ರಥಮ ಸ್ಥಾನ, ಗಣಿತ ಮಾದರಿಯಲ್ಲಿ 4 ನೇ ತರಗತಿಯ ಅವನಿ.ಪಿ ರಾವ್ (ಶ್ರೀ ಪ್ರಶಾಂತ್.ಎಸ್ ಮತ್ತು ದಿವ್ಯರಾಣಿ.ಪಿ ದಂಪತಿ ಪುತ್ರಿ) ದ್ವಿತೀಯ ಸ್ಥಾನ,

ವಿಜ್ಞಾನ ಮಾದರಿಯಲ್ಲಿ 5 ನೇ ತರಗತಿಯ ಆರ್ಯನ್ (ಶ್ರೀ ಪ್ರವೀಣ್ ಕುಮಾರ್ ಮತ್ತು ಬಿ.ಲತಾ ದಂಪತಿ ಪುತ್ರ) ದ್ವಿತೀಯ ಸ್ಥಾನ, ಗಣಿತ ಪ್ರಯೋಗದಲ್ಲಿ 5ನೇ ತರಗತಿಯ ಸಮರ್ಥ ಸುಮಂತ್(ಶ್ರೀ ಸುಮಂತ್ ಗೋಪಾಲ್ ಮತ್ತು ಸುಪ್ರೀತ ಸುಮಂತ್ ದಂಪತಿ ಪುತ್ರ) ತೃತೀಯ ಸ್ಥಾನ, ಪಡೆದಿರುತ್ತಾರೆ.

ಬಾಲ ವರ್ಗ ವಿಭಾಗ:

ಗಣಿತ ಪ್ರಯೋಗದಲ್ಲಿ ವಿಜ್ಞಾನ ಮಾದರಿಯಲ್ಲಿ 8 ನೇ ತರಗತಿಯ ಶಮನ್.ಎನ್(ಶ್ರೀ ನಿತ್ಯಾನಂದ.ಕೆ ಮತ್ತು ಸಂಧ್ಯಾ.ಕೆ ದಂಪತಿ ಪುತ್ರ) ಪ್ರಥಮ ಸ್ಥಾನ, 8ನೇ ತರಗತಿಯ ಪ್ರೀತಿ.ಪಿ.ಪ್ರಭು(ಶ್ರೀ ಪುಂಡಲೀಕ ಪ್ರಭು ಮತ್ತು ನಾಗಮಣಿ ಪ್ರಭು ದಂಪತಿ ಪುತ್ರಿ) ಪ್ರಥಮ ಸ್ಥಾನ,

ವೇದಗಣಿತ ರಸಪ್ರಶ್ನೆಯಲ್ಲಿ 8 ನೇ ತರಗತಿಯ ನಿರೀಕ್ಷಿತ್ ಹೆಗ್ಡೆ(ಶ್ರೀ ನಿಶ್ಚಯ್ ಕುಮಾರ್ ಹೆಗ್ಡೆ ಮತ್ತು ನಾಗರತ್ನ ದಂಪತಿ ಪುತ್ರ), 8 ನೇ ತರಗತಿಯ ಗೌತಮಕೃಷ್ಣ (ಶ್ರೀ ಮಹೇಶ್ ಪ್ರಸನ್ನ.ಕೆ ಮತ್ತು ಶ್ರೀಲತಾ.ಎಂ ದಂಪತಿ ಪುತ್ರ) ಮತ್ತು 7 ನೇ ತರಗತಿಯ ಶುಭನ್(ಶ್ರೀ ಪದ್ಮನಾಭ.ಕೆ ಮತ್ತು ರೇಖಾ.ಪಿ.ನಾಯ್ಕ ದಂಪತಿ ಪುತ್ರ) ಈ 3 ವಿದ್ಯಾರ್ಥಿಗಳ ತಂಡ – ಪ್ರಥಮ ಸ್ಥಾನ, ಗಣಿತ ಮಾದರಿಯಲ್ಲಿ 7ನೇ ತರಗತಿಯ ದೀಪ್ತಿ ಕುಬುಣುರಾಯ(ಶ್ರೀ ಸುಧಾಕರ ಕುಬುಣುರಾಯ ಮತ್ತು ಸವಿತ ಕುಬುಣುರಾಯ ದಂಪತಿ ಪುತ್ರಿ) ದ್ವಿತೀಯ ಸ್ಥಾನ, ವಿಜ್ಞಾನ ಮಾದರಿಯಲ್ಲಿ 8 ನೇ ತರಗತಿಯ ಎನ್.ಅಭಯ್(ಶ್ರೀ ರಂಜನ್.ಎನ್ ಮತ್ತು ರಮ್ಯ.ಯು.ಎಚ್ ದಂಪತಿ ಪುತ್ರಿ)

ತೃತೀಯ ಸ್ಥಾನ, ಗಣಿತ ಮಾದರಿಯಲ್ಲಿ 7ನೇ ತರಗತಿಯ ವೈಷ್ಣೀ ರೈ(ಶ್ರೀ ಜಗನ್ನಾಥ ಮತ್ತು ಸೀಮಾ.ಜೆ.ರೈ ದಂಪತಿ ಪುತ್ರಿ) ತೃತೀಯ ಸ್ಥಾನ, ವಿಜ್ಞಾನ ಮಾದರಿಯಲ್ಲಿ 8 ನೇ ತರಗತಿಯ ಓಂಕಾರ್ ಮಯ್ಯ (ಶ್ರೀ ಜಯಶೇಖರ ಮಯ್ಯ ಮತ್ತು ಲತಾ ಮಯ್ಯ ದಂಪತಿ ಪುತ್ರ) ತೃತೀಯ ಸ್ಥಾನ, ವಿಜ್ಞಾನ ಸೆಮಿನಾರ್‍ನಲ್ಲಿ 6ನೇ ತರಗತಿಯ ಅನಘ.ಕೆ.ಆರ್(ಶ್ರೀಮತಿ ಅಕ್ಷತಾ ಕುಮಾರಿ ಇವರ ಪುತ್ರಿ) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಕಿಶೋರ ವರ್ಗ ವಿಭಾಗ:

ಗಣಿತ ಪ್ರಯೋಗದಲ್ಲಿ 9ನೇ ತರಗತಿಯ ಕಿಶನ್ ಪ್ರಭು(ಶ್ರೀ ಸುರೇಶ್ ಪ್ರಭು ಮತ್ತು ವನಿತಾ.ಎಸ್.ಪ್ರಭು ದಂಪತಿ ಪುತ್ರ) ದ್ವಿತೀಯ ಸ್ಥಾನ, ಗಣಿತ ಮಾದರಿಯಲ್ಲಿ 10ನೇ ತರಗತಿಯ ನಿರೀಕ್ಷಾ(ಶ್ರೀ ಬಿ.ಉಮೇಶ್ ಮತ್ತು ಶರ್ಮಿಳಾ.ಯು ದಂಪತಿ ಪುತ್ರಿ) ದ್ವಿತೀಯ ಸ್ಥಾನ, ಸಂಸ್ಕೃತಿಜ್ಞಾನ ಆಶುಭಾಷಣದಲ್ಲಿ 10ನೇ ತರಗತಿಯ ಸಾನ್ವಿ.ಬಿ(ಶ್ರೀ ಬೆಳ್ಳಿಯಪ್ಪ ಗೌಡ.ಎನ್ ಮತ್ತು ಆಶಾ.ಎಂ.ಬಿ ದಂಪತಿ ಪುತ್ರಿ)

ತೃತೀಯ ಸ್ಥಾನ, ವಿಜ್ಞಾನ ಮಾದರಿಯಲ್ಲಿ 9ನೇ ತರಗತಿಯ ಹೆಚ್ .ತನ್ವಿ ನಾಯಕ್(ಶ್ರೀ ಎಚ್.ರಾಮನಾಥ್ ನಾಯಕ್ ಮತ್ತು ವಂದನಾ ನಾಯಕ್ ದಂಪತಿ ಪುತ್ರಿ) ಮತ್ತು ದಿಹರ್ಷ(ಶ್ರೀ ಶಿವ ಕುಮಾರ್ ಮತ್ತು ಎಸ್.ಪೊನ್ನಿ ದಂಪತಿ ಪುತ್ರಿ) ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.

ಪ್ರಥಮ ಸ್ಥಾನ ವಿದ್ಯಾರ್ಥಿಗಳು ಗುಲಬರ್ಗದಲ್ಲಿ ನಡೆದ ಪ್ರಾಂತ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಶಾಲಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments