ಜಟಾಯುವಿನ ಪ್ರಾಣ ಅದರ ರೆಕ್ಕೆಯಲ್ಲಿಯೇ ಇದೆ ಎಂದು ರಾವಣನಿಗೆ ಮೊದಲೇ ಗೊತ್ತಿತ್ತು!
ಹೌದು. ಹಾಗಾದರೆ ಪ್ರಾಣದ ಮರ್ಮವನು ಅರಿತು ನಾವು ಹೋರಾಟ ನಡೆಸೋಣ ಎಂದು ರಾವಣ ಜಟಾಯುವಿನಲ್ಲಿ ಹೇಳಿದ್ದು ಯಾಕೆ? ಈ ಪ್ರಶ್ನೆಗೆ ಉತ್ತರ ಹುಡುಕುವುದು ಅಷ್ಟು ಸುಲಭವಲ್ಲ. ಒಬ್ಬೊಬ್ಬರು ಒಂದೊಂದು ರೀತಿ ಉತ್ತರಿಸಬಹುದು.
ಆದರೆ ನಿಜವಾದ ಕಾರಣ ಏನು? ರಾವಣ ಜಟಾಯುವಿನಲ್ಲಿ ಯಾಕೆ ಆ ರೀತಿ ಹೇಳಿದ. ವಾಸ್ತವವಾಗಿ ಹಕ್ಕಿಗಳ ಪ್ರಾಣ ರೆಕ್ಕೆಯಲ್ಲಿ ಇರುತ್ತದೆ ಎಂದು ರಾವಣ ತಿಳಿಯದವನೇ? ಖಂಡಿತಾ ಅಲ್ಲ. ಹಾಗೆಂದುಕೊಂಡರೆ ನಮ್ಮಷ್ಟು ಮೂರ್ಖರು ಬೇರೆ ಯಾರೂ ಅಲ್ಲ.
ನಿಜವಾಗಿ ನೋಡಿದರೆ ರಾವಣ ಮಹಾಜ್ಞಾನಿ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಅಂತಹ ಶಾಸ್ತ್ರ ಪಾರಂಗತನಾದ ರಾವಣನಿಗೆ ಜಟಾಯುವಿನಲ್ಲಿ ಸುಳ್ಳು ಹೇಳುವ ಅಥವಾ ಹಕ್ಕಿಗಳ ಪ್ರಾಣ ಇರುವುದು ರೆಕ್ಕೆಗಳಲ್ಲಿ ಎಂಬುದು ತಿಳಿಯದವನಂತೆ ನಟಿಸುವ ಅಗತ್ಯ ಯಾಕೆ ಬಂತು ಎಂಬುದು ನಿಗೂಢ ಸಂಗತಿಯೇನಲ್ಲ!
ರಾಮಾಯಣದ ಈ ಭಾಗ ಯಕ್ಷಗಾನದ ತಾಳಮದ್ದಳೆಯ ಒಂದು ರಸವತ್ತಾದ ಚರ್ಚೆಯ ಭಾಗ. ಕೆಲವೊಮ್ಮೆ ಜಟಾಯು ಪಾತ್ರಧಾರಿ ರಾವಣವ ಪಾತ್ರಧಾರಿಯೊಡನೆ “ಹಕ್ಕಿಗಳ ಪ್ರಾಣ ರೆಕ್ಕೆಯಲ್ಲಿ ಇದೆ ಎನ್ನುವ ವಿಚಾರ ತಿಳಿಯದಷ್ಟು ಹೆಡ್ಡ ನೀನು” ಎಂದು ಕೆಣಕುತ್ತಾರೆ.
ಅದಕ್ಕೆ ರಾವಣ ಪಾತ್ರಧಾರಿ “ನೀನು ಎಲ್ಲ ಹಕ್ಕಿಯಂತಲ್ಲ, ನಿನ್ನಲ್ಲಿ ವಿಶೇಷ ಶಕ್ತಿ, ಸಾಮರ್ಥ್ಯ ಇರುವುದರಿಂದಲೇ ನಿನ್ನ ಪ್ರಾಣದ ಮೂಲದ ಬಗ್ಗೆ ಕೇಳಿದೆ” ಎಂದು ತನ್ನನ್ನು (ರಾವಣನನ್ನು) ಸಮರ್ಥಿಸಿಕೊಳ್ಳುತ್ತಾರೆ.
ಆದರೆ ರಾವಣನು ಜಟಾಯುವಿನಲ್ಲಿ ಪ್ರಾಣದ ಮೂಲದ ಬಗ್ಗೆ ಕೇಳಲು ಬೇರೆಯೇ ಆದ ಕಾರಣವಿದೆ. ಆತನಿಗೆ ಜಟಾಯುವಿನ ಪ್ರಾಣ ಇರುವುದು ರೆಕ್ಕೆಯಲ್ಲಿ ಎಂದು ಖಚಿತವಾಗಿ ಗೊತ್ತಿತ್ತು.
ಆದರೂ ಈ ರೀತಿಯ ನಾಟಕ ಯಾಕೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದ್ದೇ ಇರುತ್ತದೆ. ಕೆಲವರಿಗಾದರೂ ಇದರ ಕಾರಣದ ಬಗ್ಗೆ ಅರಿವಿರಬಹುದು. ಆದರೆ ನಿಜವಾದ ಕಾರಣ ಏನು? ಇದರ ಬಗ್ಗೆ ಮುಂದಿನ ಲೇಖನದಲ್ಲಿ ಚರ್ಚಿಸೋಣ.
ಬರಹ: ಯಕ್ಷಚಿಂತಕ