ಗಂಡನ ಮನೆಯಲ್ಲಿ ನವವಿವಾಹಿತೆ ಶವವಾಗಿ ಪತ್ತೆಯಾಗಿದ್ದಾರೆ
ತಿರುವನಂತಪುರಂ: ನವವಿವಾಹಿತೆಯೊಬ್ಬರು ಗಂಡನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇಪ್ಪತ್ಮೂರು ವರ್ಷದ ರೇಷ್ಮಾ ಇಂದು ಬೆಳಗಿನ ಜಾವ ಮೂರು ಗಂಟೆಗೆ ಬೆಡ್ ರೂಮ್ ನಲ್ಲಿ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಬೆಳಗ್ಗೆ ಕೊಠಡಿ ತೆರೆಯದಿರುವುದನ್ನು ಗಮನಿಸಿದ ಮನೆಯವರಿಗೆ ಸಾವಿನ ವಿಷಯ ತಿಳಿಯಿತು. ಆ ವೇಳೆ ಪತಿ ಅಕ್ಷಯ್ ರಾಜ್ ಇರಲಿಲ್ಲ. ರೇಷ್ಮಾ ಆತ್ಮಹತ್ಯೆ ಬಗ್ಗೆ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ರೇಷ್ಮಾ ಮತ್ತು ಅಕ್ಷಯ್ ರಾಜ್ ಜೂನ್ 12 ರಂದು ವಿವಾಹವಾದರು. ಅವರ ನಡುವೆ ಯಾವುದೇ ಸಮಸ್ಯೆ ಇರಲಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.
ಇತ್ತೀಚೆಗೆ ಅಕ್ಷಯ್ ರಾಜ್ ಬೇರೊಬ್ಬ ಮಹಿಳೆಗೆ ಫೋನ್ ಕರೆ ಮಾಡಿದ್ದರಿಂದ ರೇಷ್ಮಾ ಪ್ರಾಣ ತೆತ್ತಿದ್ದಾಳೆ ಎಂಬ ಆರೋಪ ಕೇಳಿಬಂದಿತ್ತು. ಆದರೆ ಇದು ಇನ್ನೂ ತನಿಖೆಯಿಂದ ತಿಳಿಯಬೇಕಿದೆ.