ಪುತ್ತೂರು: ಪುತ್ತೂರಿನ ಮಂದಿಗೆ ‘ಪ್ರಭು ಚರುಂಬುರಿ’ ಚಿರಪರಿಚಿತ. ಈ ತಾಣಕ್ಕೆ ಭೇಟಿಕೊಡದವರಿಲ್ಲ ಎಂಬಷ್ಟರ ಮಟ್ಟಿಗೆ ಈ ಅಂಗಡಿ ಪ್ರಸಿದ್ಧಿ ಪಡೆದಿದೆ. ಎಷ್ಟೋ ಮಂದಿ ಜನರ ಸಂಜೆಗಳನ್ನು ಸುಂದರಗೊಳಿಸಿದ ಕೀರ್ತಿ ‘ಪ್ರಭು ಚರುಂಬುರಿ’ಯದ್ದು.
ಇದೀಗ ಪುತ್ತೂರಿನ ಜನ ಬಹುಕಾಲದಿಂದ ನಿರೀಕ್ಷಿಸುತ್ತಿದ್ದ ಪ್ರಭು ಚರುಂಬುರಿ ಪ್ರಾಯೋಜಿತ ಚರುಂಬುರಿ ಹಬ್ಬ ಆಯೋಜನೆಗೊಳ್ಳುತ್ತಿದೆ. ಆಗಸ್ಟ್ 12ರಿಂದ ತೊಡಗಿದಂತೆ 15ರವರೆಗೆ ಈ ಚರುಂಬುರಿ ಜಾತ್ರೆ ಪ್ರತಿ ದಿನ ಸಂಜೆ 4ರಿಂದ 10ರವರೆಗೆ ನಡೆಯಲಿದೆ.
ಸುಮಾರು ಹದಿನೈದು ವಿಧದ ಚರುಂಬುರಿಗಳು ಈ ಹಬ್ಬದಲ್ಲಿ ತಯಾರಾಗಿ ಜನರ ರುಚಿಯನ್ನು ಹೆಚ್ಚಿಸಲಿವೆ.
ಹಳೆಕಾಲದ ಚರುಂಬುರಿ ಆಕರ್ಷಣೆ: ಹಳೆಕಾಲದಲ್ಲಿ ಚರುಂಬುರಿ ಮಾಡುತ್ತಿದ್ದ ವಿಧಾನ ಹಾಗೂ ಆಗಿನ ರುಚಿಯ ಚರುಂಬುರಿಯನ್ನು ಈಗಿನ ಜನಕ್ಕೆ ಒದಗಿಸುವ ಪ್ರಯತ್ನವೂ ಈ ಬಾರಿಯ ಚರುಂಬುರಿ ಹಬ್ಬದಲ್ಲಿ ನಡೆಯಲಿದೆ. ನೆಲದ ಮೇಲೆ ಕುಳಿತು, ಗ್ಯಾಸ್ ಲೈಟ್ ಉರಿಸಿ, ಆಧುನಿಕ ರುಚಿವರ್ಧಕ ಬಳಸದೆ ಮಾಡುವ ಚರುಂಬುರಿ ಈ ಬಾರಿಯ ವಿಶೇಷ ಆಕರ್ಷಣೆಯಾಗಿ ಮೂಡಿಬರಲಿದೆ.
ಇಷ್ಟಲ್ಲದೆ ಇಪ್ಪತ್ತು ರೂಪಾಯಿಗಳಿಂದ ತೊಡಗಿ ಐವತ್ತು ರೂಪಾಯಿಗಳವರೆಗಿನ ಚರುಂಬುರಿಗಳು ಈ ಹಬ್ಬದಲ್ಲಿ ಲಭ್ಯ ಇರಲಿವೆ.
ಪುತ್ತೂರಿಗೆ ಈ ಚರುಂಬುರಿ ಹಬ್ಬದ ಕಲ್ಪನೆಯನ್ನು ಪರಿಚಯಿಸಿದವರು ಸುಮಾರು ಇಪ್ಪತ್ತೆದು ವರ್ಷಗಳಿಂದ ಚರುಂಬುರಿ ವ್ಯವಹಾರದಲ್ಲಿ ತೊಡಗಿರುವ ಬಟ್ವಾಳದ ರಾಜೇಶ್ ಪ್ರಭು. ಆರಂಭದಲ್ಲಿ ಬಂಟ್ವಾಳದ ಸುತ್ತಮುತ್ತ ಚರುಂಬುರಿ ವ್ಯವಹಾರ ಮಾಡಿಕೊಂಡಿದ್ದ ರಾಜೇಶ್ ಪ್ರಭು ಅವರು ನಂತರ ಪುತ್ತೂರಿನ ಶ್ರೀಧರ ಭಟ್ ಅಂಗಡಿ ಎದುರು ಒಂದು ದಶಕಕ್ಕೂ ಮೀರಿ ಚರುಂಬುರಿ ವ್ಯವಹಾರ ನಡೆಸಿದವರು.
ಕಳೆದ ಮೂರು ವರ್ಷಗಳಿಂದ ಕೊಂಬೆಟ್ಟಿನ ಬಂಟರ ಭವನದ ಎದುಗಡೆಯ ಜಿ.ಎಲ್. ಸೆಂಟರ್‌ನಲ್ಲಿ ಇವರ ‘ಪ್ರಭು ಚರುಂಬುರಿ’ ಅಂಗಡಿ ಕಾರ್ಯನಿರ್ವಹಿಸುತ್ತಿದೆ. ಕೊರೋನ ಪೂರ್ವದಲ್ಲಿ ಒಮ್ಮೆ ಚರುಂಬುರಿ ಹಬ್ಬವನ್ನು ಆಯೋಜಿಸಿ ಅಪಾರ ಯಶಸ್ಸನ್ನು ಗಳಿಸಿದ್ದಾರೆ. ಇದೀಗ ಚರುಂಬುರಿ ಹಬ್ಬದ ಎರಡನೇ ಅವರತರಣ ಕೆ ಆರಂಭಗೊಳ್ಳುತ್ತಿದೆ. ರಾಜೇಶ್ ಪ್ರಭು ಅವರ ಜತೆಗೆ ಅವರ ಸಹವರ್ತಿಗಳಾದ ಆದರ್ಶ ವಿ, ಮಹೇಶ್, ದೇವಿಪ್ರಸಾದ್, ವನಿತಾ ಹಾಗೂ ಸುಮತಿ ಕೈ ಜೋಡಿಸಲಿದ್ದಾರೆ.
ಪಾರ್ಕಿಂಗ್ ಹಾಗೂ ಆಸನ ವ್ಯವಸ್ಥೆ: ಈ ಬಾರಿಯ ಚರುಂಬುರಿ ಹಬ್ಬಕ್ಕೆ ಆಗಮಿಸುವವರಿಗಾಗಿ ಕೊಂಬೆಟ್ಟಿನ ಪ್ರಭು ಚರುಂಬುರಿ ಅಂಗಡಿಯ ಎದುರಿನ ಬಂಟರ ಭವನದ ಪ್ರಾಂಗಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿಕೊಡಲಾಗುತ್ತಿದೆ. ಅಂತೆಯೇ ಸುಮಾರು ಇನ್ನೂರು ಜನ ಕುಳಿತು ಚರುಂಬುರಿ ಸೇವಿಸುವ ವ್ಯವಸ್ಥೆಯನ್ನು ಜಿ.ಎಲ್.ಸೆಂಟರ್ ಮಾಳಿಗೆಯಲ್ಲಿ ಒದಗಿಸಿಕೊಡಲಾಗುತ್ತಿದೆ.
ಉದ್ಘಾಟನಾ ಸಮಾರಂಭ: ಆಗಸ್ಟ್ 12ರಂದು ಸಂಜೆ 4 ಗಂಟೆಯಿಂದ ಆರಂಭಗೊಳ್ಳುವ ಈ ಹಬ್ಬಕ್ಕೆ ಆ ದಿನ ಸಂಜೆ 6.30ಕ್ಕೆ ಅಧಿಕೃತ ಉದ್ಘಾಟನೆ ನಡೆಯಲಿದೆ. ತುಳುಚಿತ್ರರಂಗ ಹಾಗೂ ರಂಗಭೂಮಿಯ ನಟ ಸತೀಶ್ ಬಂದಳೆ ಚರುಂಬುರಿ ಹಬ್ಬ ಉದ್ಘಾಟಿಸಲಿದ್ದಾರೆ. ಭಟ್ ಅಂಡ್ ಭಟ್ ಯೂಟ್ಯೂಬ್ ವಾಹನಿಯ ಸ್ಥಾಪಕ ಸುದರ್ಶನ್ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಇತ್ತೀಚೆಗೆ ನಿವೃತ್ತಿ ಘೋಷಿಸಿದ ಪುತ್ತೂರಿನ ಡಾ.ಶಿವರಾಮ ಭಟ್ ಕ್ಲಿನಿಕ್‌ನ ಕಂಪೌಂಡರ್ ನರಸಿಂಹ ಭಟ್ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions