ತಿರುಮಲ (ಆಂಧ್ರಪ್ರದೇಶ), ಆಗಸ್ಟ್ 12 ಆಂಧ್ರಪ್ರದೇಶದ ತಿರುಮಲದಲ್ಲಿ ಚಿರತೆಯೊಂದು ಆರು ವರ್ಷದ ಬಾಲಕಿಯನ್ನು ಕೊಂದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಲಕ್ಷಿತಾ ಎಂಬ ಬಾಲಕಿ ಶುಕ್ರವಾರ ರಾತ್ರಿ ನರಸಿಂಹಸ್ವಾಮಿ ದೇವಸ್ಥಾನದ ಬಳಿ ಅಲಿಪಿರಿ ವಾಕ್‌ವೇನಲ್ಲಿ ತಿರುಮಲಕ್ಕೆ ಬರುತ್ತಿದ್ದಾಗ ನಾಪತ್ತೆಯಾಗಿದ್ದು, ಶನಿವಾರ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಸಮೀಪ ಶವವಾಗಿ ಪತ್ತೆಯಾಗಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಕ್ಷಿತಾ ಅವರ ತಂದೆ ದಿನೇಶ್, “ತಿರುಮಲದಲ್ಲಿ ಪಾದಚಾರಿ ಮಾರ್ಗವನ್ನು ಹತ್ತುವಾಗ, ಕೆಲವು ಹೆಜ್ಜೆ ಮುಂದಿದ್ದ ಅವರ ಮಗಳು ಬಿಸ್ಕೆಟ್ ಪ್ಯಾಕೆಟ್ ಖರೀದಿಸಲು ಹೋಗಿದ್ದಳು. ಭಕ್ತಾದಿಗಳ ದಟ್ಟಣೆಯಿಂದಾಗಿ ಮುಂದೆ ಬಂದಿದ್ದಾಳೆ ಎಂದುಕೊಂಡೆವು, ಆದರೆ ಸ್ವಲ್ಪ ಸಮಯದ ನಂತರ ನಮಗೆ ಅವಳು ಸಿಗಲಿಲ್ಲ. ನಂತರ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ಬಳಿ ಚಿರತೆ ದಾಳಿಗೆ ಬಲಿಯಾಗಿದ್ದಾಳೆ.
ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಿರುಪತಿ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.