ನರ್ಸ್ ವೇಷದಲ್ಲಿ, ಬಂದ ಮಹಿಳೆಯೊಬ್ಬಳು ಖಾಲಿ ಸಿರಿಂಜ್ ಅನ್ನು ಚುಚ್ಚುವ ಮೂಲಕ ರೋಗಿಯನ್ನು ಕೊಲ್ಲಲು ಪ್ರಯತ್ನಿಸಿದ್ದಾಳೆ. ಅವಳನ್ನು ಬಂಧಿಸಲಾಗಿದೆ
ಹೆರಿಗೆಯಾಗಿ ಆಸ್ಪತ್ರೆಯಲ್ಲಿದ್ದ ಮಹಿಳೆಯನ್ನು ಖಾಲಿ ಸಿರಿಂಜ್ ಹಾಕಿ ಕೊಲೆ ಮಾಡಲು ಯತ್ನಿಸಿದ ಮಹಿಳೆಯನ್ನು ಬಂಧಿಸಲಾಗಿದೆ.
ಖಾಲಿ ಸಿರಿಂಜ್ ನಲ್ಲಿ ಇರುವ ಗಾಳಿ ದೇಹದೊಳಕ್ಕೆ ಹೋದರೆ ಹೃದಯಾಘಾತದಿಂದ ಸಾಯುವ ಸಂಭವವಿದೆ ಎಂದು ಆರೋಪಿ ಯುವತಿಗೆ ತಿಳಿದಿತ್ತು.
ಪುಲ್ಲುಕುಳಂಗರ ಮೂಲದ ಅನುಷಾ (25) ಬಂಧಿತ ಆರೋಪಿ ಕಾಯಂಕುಲಂ ನಿವಾಸಿ ಸ್ನೇಹಾ (24) ಎಂಬಾಕೆಯನ್ನು ಕೊಲೆ ಮಾಡಲು ಯತ್ನಿಸಿದ ಆರೋಪಿ. ಪತ್ತನಂತಿಟ್ಟದ ಪರುಮಲ ಖಾಸಗಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಅನುಷಾ ಸ್ನೇಹಾಳ ಗಂಡನ ಸ್ನೇಹಿತೆ.
ಈ ಪ್ರಕರಣದಲ್ಲಿ ಆರೋಪಿಯ ಸ್ನೇಹಿತನ ಅಂದರೆ ಸ್ನೇಹಾಳ ಗಂಡನ ಪಾತ್ರವಿದೆಯೇ ಎಂಬುದನ್ನು ಕೂಡಾ ಪೋಲೀಸರು ತನಿಖೆ ನಡೆಸಬೇಕಾಗುತ್ತದೆ ಎಂದು ತಿಳಿದುಬಂದಿದೆ.
ನಾಲ್ಕು ದಿನಗಳ ಹಿಂದೆ ಸ್ನೇಹಾ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಮೂರು ಗಂಟೆ ಸುಮಾರಿಗೆ ಅನುಷಾ ನರ್ಸ್ ಸೋಗಿನಲ್ಲಿ ಆಸ್ಪತ್ರೆಗೆ ಬಂದಿದ್ದಳು. ಬಳಿಕ ಹೆರಿಗೆಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಸ್ನೇಹಾಳ ಕೊಠಡಿಗೆ ತೆರಳಿ ಖಾಲಿ ಸಿರಿಂಜ್ ಹಾಕಿ ಕೊಲೆ ಮಾಡಲು ಯತ್ನಿಸಿದ್ದಾಳೆ.
ವೃತ್ತಿಯಲ್ಲಿ ಫಾರ್ಮಸಿಸ್ಟ್ ಆಗಿರುವ ಅನುಷಾ ಅವರು ಅಪಧಮನಿಯೊಳಗೆ ಗಾಳಿ ಪ್ರವೇಶಿಸಿದರೆ ಅದರಿಂದ ಜೀವಕ್ಕೆ ಅಪಾಯವಿದೆ ಎಂದು ಅರಿತು ಈ ಕೃತ್ಯ ಎಸಗಿದ್ದಾರೆ ಎಂದು ವರದಿಯಾಗಿದೆ.
ಏರ್ ಇಂಜೆಕ್ಷನ್ ನಂತರ ಸ್ನೇಹಾಗೆ ಹೃದಯಾಘಾತವಾಗಿತ್ತು, ಆದರೆ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.
ಆರೋಪಿ ಕೊಠಡಿಯಿಂದ ಹೊರಗೆ ಹೋಗುತ್ತಿದ್ದಾಗ ಅನುಮಾನಗೊಂಡ ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ನಂತರ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ಆಕೆಯ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.