ಮಲಪ್ಪುರಂ: ಅಲುವಾದಲ್ಲಿ ಐದು ವರ್ಷದ ಬಾಲಕಿಯೊಬ್ಬಳು ಲೈಂಗಿಕ ಕಿರುಕುಳ ನೀಡಿ ಬರ್ಬರವಾಗಿ ಹತ್ಯೆ ಮಾಡಿರುವ ಸುದ್ದಿ ಕೇರಳದಲ್ಲಿ ಇನ್ನೂ ಹಸಿರಾಗಿದೆ..
ಇದೀಗ ಮಲಪ್ಪುರಂನಲ್ಲೂ ಅಂಥದ್ದೇ ಒಂದು ಅಪರಾಧ ವರದಿಯಾಗಿದೆ. ತಿರುರಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಚೇಳಾರಿ ಎಂಬಲ್ಲಿ ನಾಲ್ಕು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ.
ಬಲಿಪಶು ವಲಸೆ ಕಾರ್ಮಿಕ ದಂಪತಿಯ ಪುತ್ರಿ. ದಂಪತಿಯ ಸ್ನೇಹಿತ, ಮಧ್ಯಪ್ರದೇಶ ಮೂಲದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ವಲಸೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಪ್ರದೇಶದಲ್ಲಿ ಗುರುವಾರ ಸಂಜೆ ಈ ಘಟನೆ ನಡೆದಿದೆ.
ಆಕೆಯೊಂದಿಗೆ ಆಟವಾಡುವ ನೆಪದಲ್ಲಿ ಆರೋಪಿ ಮಗುವನ್ನು ತನ್ನ ಕೋಣೆಗೆ ಕರೆದೊಯ್ದಿದ್ದಾನೆ. ಬಾಲಕಿಯ ಕಿರುಚಾಟ ಕೇಳಿ ಪೋಷಕರು ಸ್ಥಳಕ್ಕೆ ಧಾವಿಸಿದ್ದಾರೆ. ಮಗುವಿನ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಗುವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಆರೋಪಿಯನ್ನು ಬಂಧಿಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಪೊಲೀಸರಿಂದ ಬಂದಿರುವ ಮಾಹಿತಿ ಪ್ರಕಾರ ಆರೋಪಿ ಹಾಗೂ ಮಗುವಿನ ಪೋಷಕರು ಮಧ್ಯಪ್ರದೇಶ ಮೂಲದವರು.