ಯಕ್ಷಸಿಂಚನ ಟ್ರಸ್ಟ್ (ರಿ), ಬೆಂಗಳೂರು ಇದರ 14ನೇ ವರುಷದ ವಾರ್ಷಿಕೋತ್ಸವದ ಅಂಗವಾಗಿ ಆಗಸ್ಟ್ 06 2023 ನೇ ಭಾನುವಾರ ಮಧ್ಯಾಹ್ನ 3 ರಿಂದ ಬಡಗುತಿಟ್ಟು ಪೌರಾಣಿಕ ಯಕ್ಷೋತ್ಸವನ್ನು ಆಯೋಜಿಸಲಾಗಿದೆ. ಮಧಾಹ್ನ 3 ರಿಂದ ಯಕ್ಷಕಲಾ ಅಕಾಡಮಿ ಬೆಂಗಳೂರು ಇದರ ಬಾಲ ಕಲಾವಿದರಿಂದ ಪಾರ್ತಿಸುಬ್ಬ ಮತ್ತು ಹೊಸ್ತೋಟ ಮಂಜುನಾಥ ಭಾಗವತರು ರಚಿತ ಭರತಾಗಮನ ಹಾಗೂ ಸಂಜೆ 5 ರಿಂದ ಯಕ್ಷಸಿಂಚನ ತಂಡದ ಕಲಾವಿದರಿಂದ ಶ್ರೀಧರ್ ಡಿ.ಎಸ್ ರಚಿತ ಭೃಗು ಶಾಪ ಪ್ರಸಂಗಗಳು ಪ್ರದರ್ಶನಗೊಳ್ಳಲಿದೆ.
ಇದೇ ಸಂದರ್ಭದಲ್ಲಿ ಖ್ಯಾತ ಹಿಮ್ಮೇಳ ಕಲಾವಿದರು ಹಾಗೂ ಯಕ್ಷಗುರುಗಳಾದ ಶ್ರೀ ಐನ್ಬೈಲ್ ಪರಮೇಶ್ವರ ಹೆಗಡೆ ಅವರಿಗೆ ಸಾರ್ಥಕ ಸಾಧಕ-2023 ಪ್ರಶಸ್ತಿ ಪ್ರದಾನವಾಗಲಿದೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಶ್ರೀಧರ್ ಡಿ.ಎಸ್ ಖ್ಯಾತ ಪ್ರಸಂಗಕರ್ತರು ಹಾಗೂ ಸಾಹಿತಿಗಳು, ಶ್ರೀ ಜಗದೀಶ್ ಶರ್ಮ ಸಂಪಾ, ಖ್ಯಾತ ಸಾಹಿತಿಗಳು, ಶ್ರೀ ಕಿರಣ್ ಉಪಾಧ್ಯಾಯ, ಬಹ್ರೇನ್ , ಖ್ಯಾತ ಅಂಕಣಕಾರರು ಇವರುಗಳು ಪಾಲ್ಗೊಳ್ಳಲಿದ್ದಾರೆ.
ಈ ಕಾರ್ಯಕ್ರಮವು ಉದಯಭಾನು ಕಲಾಸಂಘ, ಗವಿಪುರ ಸಾಲು ಛತ್ರಗಳ ಎದುರು, ರಾಮಕೃಷ್ಣಮಠ ಬಡಾವಣೆ, ಕೆಂಪೇಗೌಡನಗರ, ಬೆಂಗಳೂರು ಇಲ್ಲಿ ಸಂಪನ್ನವಾಗುತ್ತಿದೆ.
ಹಿಮ್ಮೇಳದಲ್ಲಿ ಶ್ರೀ ಐನ್ಬೈಲ್ ಪರಮೇಶ್ವರ ಹೆಗಡೆ, ಶ್ರೀ ಎ.ಪಿ. ಪಾಠಕ್, ಶ್ರೀ ಕೃಷ್ಣಮೂರ್ತಿ ತುಂಗ, ಕುಮಾರಿ ಚಿತ್ಕಲಾ ತುಂಗಾ, ಶ್ರೀ ಚಿನ್ಮಯ ಅಂಬರಗೊಡ್ಲು, ಶ್ರೀ ಮನೋಜ್ ಆಚಾರ್ಯ ಭಾಗವಹಿಸಿದರೆ
ಮುಮ್ಮೇಳದಲ್ಲಿ ಕುಮಾರಿ ಪಂಚಮಿ, ಕುಮಾರ ರಜತ್, ಕುಮಾರ ರಿತೇಶ್, ಕುಮಾರಿ ವೈಷ್ಣವಿ, ಕುಮಾರ ಅಶ್ವಿನ್, ಕುಮಾರಿ ಭಾರ್ಗವಿ, ಕುಮಾರ ಸುಜನ್, ಕುಮಾರ ಸೃಜನ್, ಕುಮಾರ ಸ್ಕಂದ, ಕುಮಾರ ಪುರುಜಿತ್, ಕುಮಾರಿ ಕಾತ್ಯಾಯಿನಿ, ಶ್ರೀ ಪ್ರವೀಣ್ ಉಡುಪಿ, ಶ್ರೀ ರವಿ ಮಡೋಡಿ, ಶ್ರೀ ಶಶಿರಾಜ ಸೋಮಯಾಜಿ, ಶ್ರೀ ಮನೋಜ್ ಭಟ್, ಶ್ರೀ ಗುರುರಾಜ್ ಭಟ್, ಶ್ರೀ ಶಶಾಂಕ್ ಕಾಶಿ, ಶ್ರೀ ಆದಿತ್ಯ ಉಡುಪ, ಶ್ರೀ ಕೃಷ್ಣ ಶಾಸ್ತ್ರಿ ಮುಂತಾದವರು ಭಾಗವಹಿಸುತ್ತಿದ್ದಾರೆ.
ನಿರ್ದೇಶನ: ಶ್ರೀ ಕೃಷ್ಣಮೂರ್ತಿ ತುಂಗ
ಸಂಪರ್ಕ: ರವಿ ಮಡೋಡಿ-9986384205, ಶಶಿರಾಜ ಸೋಮಯಾಜಿ- 9986363495