Saturday, January 18, 2025
Homeಸುದ್ದಿಯಕ್ಷಶಿಕ್ಷಣ ಟ್ರಸ್ಟಿನ ವಾರ್ಷಿಕ ಸಭೆ

ಯಕ್ಷಶಿಕ್ಷಣ ಟ್ರಸ್ಟಿನ ವಾರ್ಷಿಕ ಸಭೆ


ಯಕ್ಷಶಿಕ್ಷಣ ಟ್ರಸ್ಟಿನ ವಾರ್ಷಿಕ ಸಭೆ 27.07.2023ರಂದು ಶ್ರೀ ಕೃಷ್ಣ ಮಠದ ಕನಕಮಂಟಪದಲ್ಲಿ ಪರ್ಯಾಯ ಮಠಾಧೀಶರೂ ಟ್ರಸ್ಟಿನ ಗೌರವಾಧ್ಯಕ್ಷರೂ ಆದ ಪೂಜ್ಯ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಜರಗಿತು.

ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ, ಟ್ರಸ್ಟ್ ನೂತನ ಅಧ್ಯಕ್ಷರೂ ಆದ ಯಶ್ಪಾಲ್ ಎ. ಸುವರ್ಣ, ಸ್ಥಾಪಕ ಅಧ್ಯಕ್ಷರಾದ ಕೆ. ರಘುಪತಿ ಭಟ್ ಇವರ ಸಮ್ಮುಖದಲ್ಲಿ ಜರಗಿದ ಸಭೆಯಲ್ಲಿ ಕೋಶಾಧಿಕಾರಿ ಎಚ್. ಎನ್. ಶೃಂಗೇಶ್ವರ್ ಲೆಕ್ಕಪತ್ರ ಮಂಡಿಸಿದರು.

ಕಾರ್ಯದರ್ಶಿ ಮುರಲಿ ಕಡೆಕಾರ್ ವರದಿ ಒಪ್ಪಿಸಿದರು. 14 ವರ್ಷ ಕೋಶಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಕೆ. ಎಸ್. ಸುಬ್ರಮಣ್ಯ ಬಾಸ್ರಿ ಇವರ ಸೇವೆಯನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳಲಾಯಿತು.

ಈ ಬಾರಿ ಉಡುಪಿ ವಿಧಾನಸಭಾ ಕ್ಷೇತ್ರದ 43 ಪ್ರೌಢಶಾಲೆಗಳು, ಹಾಗೂ ಪ್ರಥಮ ಬಾರಿಗೆ ಕಾಪು ವಿಧಾನಸಭಾ ಕ್ಷೇತ್ರದ 15 ಪ್ರೌಢಶಾಲೆಗಳು, ಕುಂದಾಪುರ ವಿಧಾನಸಭಾ ಕ್ಷೇತ್ರದ 9 ಪ್ರೌಢಶಾಲೆಗಳು ಯಕ್ಷಶಿಕ್ಷಣಕ್ಕೆ ಒಳಪಡಲಿವೆ. 32 ಗುರುಗಳು ಯಕ್ಷಶಿಕ್ಷಣ ನೀಡಲಿದ್ದಾರೆ.

ಟ್ರಸ್ಟಿಗೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಕಿರಣ್ ಕುಮಾರ್ ಕೊಡ್ಗಿ ಇವರನ್ನು ಸಹ ಸದಸ್ಯರನ್ನಾಗಿ ನೇಮಿಸಕೊಳ್ಳಬೇಕೆಂದು ನಿರ್ಣಯಿಸಲಾಯಿತು.

ಸಭೆಯಲ್ಲಿ ಟ್ರಸ್ಟಿಗಳಾದ ಎಂ. ಗಂಗಾಧರ್ ರಾವ್, ವಿ. ಜಿ. ಶೆಟ್ಟಿ, ಎಸ್. ವಿ. ಭಟ್, ಮೀನಾಲಕ್ಷಣ ಅಡ್ಯಂತಾಯ, ವಿದ್ಯಾ ಪ್ರಸಾದ್, ಗಣೇಶ್ ಬ್ರಹ್ಮಾವರ್, ನಟರಾಜ ಉಪಾಧ್ಯ, ನಾಗರಾಜ ಹೆಗಡೆ ಉಪಸ್ಥಿತರಿದ್ದರು.

ಡಿಸೆಂಬರ್ ತಿಂಗಳಲ್ಲಿ ಯಕ್ಷಗಾನ ಪ್ರದರ್ಶನ ಆಯೋಜಿಸುವುದೆಂದು ತೀರ್ಮಾನಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments