Saturday, November 23, 2024
Homeಸುದ್ದಿಅಮರನಾಥ ಯಾತ್ರೆ ಮುಗಿಸಿ ಬರುತ್ತಿದ್ದ ಬಸ್ಸಿಗೆ ಇನ್ನೊಂದು ಬಸ್‌ ಡಿಕ್ಕಿ ಹೊಡೆದು 6 ಸಾವು, 20...

ಅಮರನಾಥ ಯಾತ್ರೆ ಮುಗಿಸಿ ಬರುತ್ತಿದ್ದ ಬಸ್ಸಿಗೆ ಇನ್ನೊಂದು ಬಸ್‌ ಡಿಕ್ಕಿ ಹೊಡೆದು 6 ಸಾವು, 20 ಮಂದಿಗೆ ಗಾಯ


ಬುಲ್ಧಾನ ಬಸ್ ಅಪಘಾತ: ಆರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡಿರುವ ಸುಮಾರು 20 ಮಂದಿಯನ್ನು ಬುಲ್ಧಾನಾದ ಆಸ್ಪತ್ರೆಗೆ ದಾಖಲಿಸಲಾಗಿದೆ.


ಮಹಾರಾಷ್ಟ್ರದ ಬುಲ್ಧಾನಾದಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡಿದ್ದಾರೆ. ಪೊಲೀಸರ ಪ್ರಕಾರ, ಮಲ್ಕಾಪುರ ಪ್ರದೇಶದ ನಂದೂರ್ ನಾಕಾ ಮೇಲ್ಸೇತುವೆಯಲ್ಲಿ ಎನ್‌ಎಚ್ 53 ರಲ್ಲಿ ಬೆಳಗಿನ ಜಾವ 2.30 ರ ಸುಮಾರಿಗೆ ಎರಡು ಬಸ್‌ಗಳು ಮುಖಾಮುಖಿ ಡಿಕ್ಕಿ ಹೊಡೆದವು.


ಬಾಲಾಜಿ ಟ್ರಾವೆಲ್ಸ್ ಹೆಸರಿನ ಕಂಪನಿಯ ಒಡೆತನದ ಒಂದು ಬಸ್ ಅಮರನಾಥ ಯಾತ್ರೆಯಿಂದ ಹಿಂಗೋಲಿ ಜಿಲ್ಲೆಗೆ ಹಿಂತಿರುಗುತ್ತಿತ್ತು, ಇನ್ನೊಂದು ರಾಯಲ್ ಟ್ರಾವೆಲ್ಸ್ ಕಂಪನಿಯ ಮಾಲೀಕತ್ವದ ನಾಸಿಕ್ಮ್‌ಗೆ ಹೋಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಂದೂರ್ ನಾಕಾದಲ್ಲಿ ಒಂದು ಬಸ್ ಇನ್ನೊಂದನ್ನು ಹಿಂದಿಕ್ಕಿತು, ನಂತರ ಎರಡು ಡಿಕ್ಕಿ ಹೊಡೆದವು. ಆರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಾಯಗೊಂಡಿರುವ ಸುಮಾರು 20 ಮಂದಿಯನ್ನು ಬುಲ್ಧಾನಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಣ್ಣಪುಟ್ಟ ಗಾಯಗಳೊಂದಿಗೆ 32 ಪ್ರಯಾಣಿಕರಿಗೆ ಸಮೀಪದ ಗುರುದ್ವಾರದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ.


ಅಮರನಾಥದಿಂದ ಹಿಂತಿರುಗುತ್ತಿದ್ದ ಬಸ್ಸಿನ ಚಾಲಕ ಮೃತಪಟ್ಟವರಲ್ಲಿ ಸೇರಿದ್ದಾರೆ.

ಹೆದ್ದಾರಿ ಪೊಲೀಸರ ಪ್ರಕಾರ, ಬಸ್ ಅನ್ನು ರಸ್ತೆಯಿಂದ ತೆಗೆದುಹಾಕಿದ ನಂತರ ಸಂಚಾರವನ್ನು ಪುನಃಸ್ಥಾಪಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments