ದೇಶಗಳ ಸಂಸ್ಕೃತಿಯನ್ನು ಬಿಂಬಿಸುವ ಹಾಗೂ ಇತರರೊಡನೆ ಕ್ರಿಯಾಶೀಲವಾಗಿ ಪಾಲ್ಗೊಳ್ಳುವ, ನಾಯಕತ್ವ , ಕುಶಲತೆ ಮತ್ತು ವೈಯಕ್ತಿಕ ಹೊಣೆಗಾರಿಕೆಯ ನಿಟ್ಟಿನಲ್ಲಿ ನಿಮ್ಮ ಕನಸುಗಳನ್ನು ಚಿತ್ರಿಸಿಕೊಳ್ಳಿ (Draw Your Dream) ಎಂಬ ಧ್ಯೇಯದೊಂದಿಗೆ ದಕ್ಷಿಣ ಕೊರಿಯಾದ ಜಿಯೋಲ್ಲಾ ಬುಕ್- ಡೋ-ನಗರದ ಸೀಮನ್ ಗಾಮ್‌ನಲ್ಲಿ ದಿನಾಂಕ 01.08.2023 ರಿಂದ 12-08-2023 ರವರೆಗೆ ನಡೆಯುವ ಸ್ಕೌಟ್ಸ್ ಮತ್ತು ಗೈಡ್ಸ್ ನ 25ನೇ ವಿಶ್ವ ಜಾಂಬೂರಿಯಲ್ಲಿ 2023ರಲ್ಲಿ ಭಾರತ ದೇಶದ ಪ್ರತಿನಿಧಿಗಳಾಗಿ ಭಾಗವಹಿಸಲು ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದ ಮೂವರು ವಿದ್ಯಾರ್ಥಿಗಳು ಆಯ್ಕೆಗೊಂಡಿದ್ದಾರೆ.
ರಾಜ್ಯ ಪುರಸ್ಕಾರವನ್ನು ಪಡೆದ ವಿದ್ಯಾರ್ಥಿಗಳಾದ ಆದ್ಯ ಸುಲೋಚನಾ (ಮುಳಿಯ ಜ್ಯುವೆಲ್ಲರ್ಸ್ ನ ಶ್ರೀ ಕೃಷ್ಣಪ್ರಸಾದ್ ಮುಳಿಯ ಮತ್ತು ಕೃಷ್ಣವೇಣಿ ಮುಳಿಯ ದಂಪತಿ ಪುತ್ರಿ ) , ಇವರು ಅಂತರಾಷ್ಟ್ರೀಯ ಸೇವಾ ತಂಡದಲ್ಲಿ ಯೋಗ ತರಬೇತುದಾರಳಾಗಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ, ಧನುಷ್‍ರಾಮ್ (ಕಿಯೋನಿಕ್ಸ್ ನ ಶ್ರೀ ದಿನೇಶ್ ಪ್ರಸನ್ನ ಮತ್ತು ಶ್ರೀಮತಿ ಉಮಾ ಪ್ರಸನ್ನ ರವರ ಪುತ್ರ ), ಇಶಾ ಸುಲೋಚನಾ (ಮುಳಿಯ ಜ್ಯುವೆಲ್ಲರ್ಸ್ ನ ಶ್ರೀ ಕೃಷ್ಣನಾರಾಯಣ ಮುಳಿಯ ಮತ್ತು ಅಶ್ವಿನಿಕೃಷ್ಣ ಮುಳಿಯ ದಂಪತಿ ಪುತ್ರಿ ) ಇವರು ದಕ್ಷಿಣ ಕನ್ನಡ ಜಿಲ್ಲೆಯ ಸೇವಾ ತಂಡದ ಸದಸ್ಯೆ. ಇವರು ಭಾಗವಹಿಸಲಿದ್ದಾರೆ.
“ಯುವ ಜನಾಂಗಕ್ಕೆ ಇದೊಂದು ಅವಕಾಶ ತಲೆಮಾರುಗಳ ಮಧ್ಯೆ ತಿಳುವಳಿಕೆಯನ್ನು ಉತ್ತಮ ಪಡಿಸಿಕೊಳ್ಳುವ ಒಂದು ಮಾರ್ಗ ವಯಸ್ಕ ನಾಯಕರು ತಮ್ಮ ಸೇವೆಯಲ್ಲಿ ಮೌಲಿಕವಾದ ತರಬೇತಿ ಮತ್ತು ಅನುಭವ ಪಡೆಯುತ್ತಾರೆ.
ಇದರಿಂದ ಅವರ ವೈಯಕ್ತಿಕ ವಿಕಾಸಕ್ಕೂ ಅನುಕೂಲವಾಗುತ್ತದೆ ಮತ್ತು ಉತ್ತಮ ನಾಗರಿಕರನ್ನು ನಿರ್ಮಾಣ ಮಾಡುವ ಕೆಲಸ ಸ್ಕೌಟ್ಸ್ ಮತ್ತು ಗೈಡ್ಸ್ ನಿಂದ ಆಗಬೇಕೆಂದು ಹಾಗೂ ನಿಮ್ಮ ಪ್ರಯಾಣ ಸುಖಕರವಾಗಲಿ”. ಎಂದು ಶುಭವನ್ನು ಹಾರೈಸಿ ,
ಜುಲೈ 31ಕ್ಕೆ ಮಂಗಳೂರಿನಿಂದ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸುವ 48 ವಿದ್ಯಾರ್ಥಿಗಳ ತಂಡದೊಂದಿಗೆ ವಿದ್ಯಾರ್ಥಿಗಳು ಬೆಂಗಳೂರು ಮತ್ತು ಹಾಂಕಾಂಗ್ ಮೂಲಕ ಸೌತ್ ಕೊರಿಯಾಕ್ಕೆ ತೆರಳಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.ಎಂದು ಸಂಸ್ಥೆಯ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions