ಸರಕಾರಿ ಪ್ರೌಢ ಶಾಲೆ ನುಕ್ಕೂರು ಯಕ್ಷಗಾನ ತರಬೇತಿ ಉದ್ಘಾಟನೆ.
ಸರಕಾರಿ ಪ್ರೌಢಶಾಲೆ ನುಕ್ಕೂರು ಇಲ್ಲಿ ದಿನಾಂಕ 11.07.2023ನೇ ಮಂಗಳವಾರದಂದು ಯಕ್ಷಗಾನ ತರಗತಿಯ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಯಕ್ಷಶಿಕ್ಷಣ ಟ್ರಸ್ಟ್ ಉಡುಪಿ ಇದರ ಕಾರ್ಯದರ್ಶಿಯಾಗಿರುವ ಮುರಲಿ ಕಡೆಕಾರ್ ಇವರು ದೀಪವನ್ನು ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಮಾರಂಭದ ವೇದಿಕೆಯಲ್ಲಿ ಯಕ್ಷಶಿಕ್ಷಣ, ಟ್ರಸ್ಟ್ನ ಸದಸ್ಯರಾಗಿರುವ ಗಣೇಶ ಬ್ರಹ್ಮಾವರ, ಯಕ್ಷಗಾನದ ಗುರುಗಳಾದ ಮಹೇಶ್ ಮಂದಾರ್ತಿ. ಮುಖ್ಯ ಶಿಕ್ಷಕರಾಗಿರುವ ವಿಜಯ ಕುಮಾರ್ ಹಾಗೂ ಯಕ್ಷಗಾನ ತರಗತಿಯ ನೋಡಲ್ ಶಿಕ್ಷಕಿಯಾದ ಸಪ್ನಾ ಗಾಂವ್ಕರ್ ಉಪಸ್ಥಿತರಿದ್ದರು.
ಸಂಸ್ಥೆಯ ಶಿಕ್ಷಕರುಗಳಾದ ಸತೀಶ್ ಜಿ., ಪ್ರೀತಿ ಹಾಜರಿದ್ದರು. ಕಾರ್ಯಕ್ರಮವನ್ನು ಸುಜಾತ ಕುಮಾರಿ ನಿರ್ವಹಿಸಿದರೆ ಆಂಗ್ಲಭಾಷಾ ಶಿಕ್ಷಕರಾದ ರವಿ ನಾಯಕ್ ವಂದಿಸಿದರು.