ಪುತ್ತೂರು, ಜೂ 1: ವಿದ್ಯೆ ಎಂದರೆ ಕೇವಲ ಪುಸ್ತಕದ ಮಾಹಿತಿಯಲ್ಲ ಬದಲಿಗೆ ವಿವೇಕ, ಪ್ರಜ್ಞೆ, ಬುದ್ದಿವಂತಿಕೆ ,ಜ್ಞಾನ ತಿಳುವಳಿಕೆಗಳನ್ನು ಒಳಗೊಂಡಿದೆ. ವಿದ್ಯೆ, ಬುದ್ಧಿ, ಸಂಗೀತ ಮತ್ತು ಕಲೆ ಸಂಸ್ಕೃತಿಯ ಪ್ರತೀಕವಾಗಿರುವ ಭಾರತೀಯದೇವತೆ ಸರಸ್ವತಿಯನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ಪೂಜಿಸಬೇಕು ಎಂದು ಕಶೆಕೋಡಿ ಸೂರ್ಯನಾರಾಯಣ ಭಟ್ ಹೇಳಿದರು.
ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪ್ರಾರಂಭೋತ್ಸವದ ಅಂಗವಾಗಿ ಆಯೋಜಿಸಲಾದ ಸರಸ್ವತಿ ಪೂಜಾ ಮತ್ತು ಗಣಹೋಮ ಕಾರ್ಯಕ್ರಮವನ್ನು ನೆರವೇರಿಸಿ ಅವರು ಮಾತನಾಡಿದರು.
ಯಾವುದೇ ಒಂದು ವಿದ್ಯಾಸಂಸ್ಥೆ ಅಥವಾ ವಿದ್ಯಾರ್ಥಿಯು ಬೆಳಗಬೇಕಾದರೆ ತನ್ನೊಳಗಿರುವ ಅಂತ:ಶಕ್ತಿಯನ್ನು ಪ್ರಕಟಪಡಿಸಬೇಕು. ಇದಕ್ಕೆ ವಿದ್ಯಾಧಿದೇವತೆಯಾದ ಸರಸ್ವತಿಯ ಪೂರ್ಣನುಗ್ರಹ ಅತ್ಯಗತ್ಯ. ಈ ದಿಶೆಯಲ್ಲಿ ವಿವೇಕಾನಂದ ಪದವಿಪೂರ್ವ ವಿದ್ಯಾಲಯವು ಮಾದರಿಯಾಗಿ ಪ್ರತಿವರ್ಷವು ಇಂತಹ ಜ್ಞಾನಾಭಿವೃದ್ಧಿ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಂಡು ಬರುತ್ತಿದೆ.
ಭಗವಂತನ ಆಶೀರ್ವಾದದಿಂದ ಸತ್ಕಮ ಕಾರ್ಯಗಳು ಕೈಗೂಡುತ್ತಿವೆ.ಈ ಮೂಲಕ ಎಲ್ಲಾರಿಗೂ ಆಯುರಾರೋಗ್ಯ ಮತ್ತು ಸುಖ, ಶಾಂತಿ, ನೆಮ್ಮದಿ ಲಭಿಸಿ ಉತ್ತಮ ರೀತಿಯಲ್ಲಿ ವಿದ್ಯಾರ್ಥಿಗಳು ವಿದ್ಯಾರ್ಜನೆಗೈದು ಭವ್ಯಭಾರತದ ನಿರ್ಮಾಣ ಮಾಡುವಂತಾಗಲಿ. ಈ ಮೂಲಕ ಸಂಸ್ಥೆಯಲ್ಲಿ ಕಲಿಯುತ್ತಿರುವ ಎಲ್ಲರಿಗೂ ಆ ಸರಸ್ವತಿಯ ಅನುಗ್ರಹವು ಪ್ರಾಪ್ತಿಯಾಗಲಿ ಎಂದು ಶುಭ ಹಾರೈಸಿದರು.
ಬಳಿಕ ವಿದ್ಯಾರ್ಥಿಗಳಿಗೆ ಶಾರದಾ ಶ್ಲೋಕದ ಪಠಣವನ್ನು ಬೋಧಿಸಲಾಯಿತು. ಕಶೆಕೋಡಿ ಸೂರ್ಯನಾರಾಯಣ ಭಟ್ ಇವರ ನೇತೃತ್ವದಲ್ಲಿ ಪೂಜವಿಧಿಗಳು ನೇರವೇರಿದವು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸಂಚಾಲಕ ಗೋಪಾಲಕೃಷ್ಣ ಭಟ್, ಸದಸ್ಯರಾದ ಡಾ. ಕೆ.ಎನ್ ಸುಬ್ರಹ್ಮಣ್ಯ, ವತ್ಸಲಾರಾಜ್ಞಿ, ಸದಸ್ಯರು, ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿಗಳು, ಪ್ರಾಂಶುಪಾಲ ಮಹೇಶ ನಿಟಿಲಾಪುರ, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ, ವಿದ್ಯಾರ್ಥಿ ಸಮೂಹ ಪೂರ್ಣಹುತಿಯಲ್ಲಿ ಹಾಜರಿದ್ದು ದೇವರ ಕೃಪೆಗೆ ಪಾತ್ರರಾದರು.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions