Saturday, July 6, 2024
Homeಯಕ್ಷಗಾನಯಕ್ಷಗಾನ ಕಲಾರಂಗ ತಾಳಮದ್ದಲೆ ಸಪ್ತಾಹ ಸಮಾರೋಪ - ಶ್ರೀಕರ ಭಟ್ ಹಾಗೂ ಪಾದೇಕಲ್ಲು ವಿಷ್ಣು ಭಟ್‌ರಿಗೆ...

ಯಕ್ಷಗಾನ ಕಲಾರಂಗ ತಾಳಮದ್ದಲೆ ಸಪ್ತಾಹ ಸಮಾರೋಪ – ಶ್ರೀಕರ ಭಟ್ ಹಾಗೂ ಪಾದೇಕಲ್ಲು ವಿಷ್ಣು ಭಟ್‌ರಿಗೆ ಪ್ರಶಸ್ತಿ

ಉಡುಪಿ : ಯಕ್ಷಗಾನ ಕಲಾರಂಗ ಆಯೋಜಿಸಿದ ತಾಳಮದ್ದಲೆ ಸಪ್ತಾಹದ ಸಮಾರೋಪ ಸಮಾರಂಭ 27-5-2023ರಂದು ಶಿರ್ವದ ಮಹಿಳಾ ಸೌಧದಲ್ಲಿ ಜರಗಿತು.

ಈ ಸಂದರ್ಭದಲ್ಲಿ ಶ್ರೀ ಶ್ರೀಕರ ಭಟ್ ಇವರಿಗೆ ಮಟ್ಟಿ ಮುರಲೀಧರ ರಾವ್ ಪ್ರಶಸ್ತಿಯನ್ನು ಹಾಗೂ ಪಂಡಿತ ಪೆರ್ಲ ಕೃಷ್ಣ ಭಟ್ ಪ್ರಶಸ್ತಿಯನ್ನು ಡಾ. ಪಾದೇಕಲ್ಲು ವಿಷ್ಣು ಭಟ್‌ರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ಇಪ್ಪತ್ತು ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಪತ್ರವನ್ನೊಳಗೊಂಡಿದೆ.

ಇದೇ ಸಂದರ್ಭದಲ್ಲಿ ಕಾಪು ಶಾಸಕರಾದ ಶ್ರೀ ಗುರ್ಮೆ ಸುರೇಶ್ ಶೆಟ್ಟಿಯವರನ್ನು ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು. ಕಾಪು ವಿಧಾನಸಭಾ ಕ್ಷೇತ್ರದ ಕೆಲವು ಶಾಲೆಗಳಲ್ಲಾದರೂ ಯಕ್ಷಶಿಕ್ಷಣ ಟ್ರಸ್ಟ್ ಮೂಲಕ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಸಿ ಪ್ರದರ್ಶನ ವ್ಯವಸ್ಥೆ ಮಾಡಬೇಕೆಂಬ ಅಪೇಕ್ಷೆಯನ್ನು ಶಾಸಕರಾದ ಗುರ್ಮೆಯವರು ವ್ಯಕ್ತಪಡಿಸಿದರು.

ಪೆರ್ಲ ಪ್ರಶಸ್ತಿ ಸ್ಥಾಪಿಸಿದ ಕೃಷ್ಣಪ್ರಸಾದ್ ಅಡ್ಯಂತಾಯ ಅಧ್ಯಕ್ಷೀಯ ಮಾತುಗಳನ್ನಾಡಿ ಕಲಾರಂಗದ ಚತುರ್ಮುಖದ ಚಟುವಟಿಕೆಗಳನ್ನು ಮೆಚ್ಚಿ, ಸನ್ಮಾನಿತರನ್ನು ಅಭಿನಂದಿಸಿದರು. ಶಿರ್ವದ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀ ರಾಮ ಶೆಟ್ಟಿ ಹಾಗೂ ಯಕ್ಷಗಾನ ಅಭಿಮಾನಿ ಬಳಗದ ಪ್ರಮುಖರಾದ ಶ್ರೀಪತಿ ಕಾಮತ್ ಅಭ್ಯಾಗತರಾಗಿ ಭಾಗವಹಿಸಿ ಶುಭ ಹಾರೈಸಿದರು.

ಆರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ತಾಳಮದ್ದಲೆ ಸಪ್ತಾಹವನ್ನು ಸಂಯೋಜಿಸಿದ ಜತೆಕಾರ್ಯದರ್ಶಿ ನಾರಾಯಣ ಎಮ್. ಹೆಗಡೆ ಸನ್ಮಾನಿತರನ್ನು ಪರಿಚಯಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದ ಕಾರ್ಯಕ್ರಮದ ಕೊನೆಯಲ್ಲಿ ಎಚ್.ಎನ್. ಶೃಂಗೇಶ್ವರ ಧನ್ಯವಾದ ಸಲ್ಲಿಸಿದರು.

ಉಪಾಧ್ಯಕ್ಷರಾದ ಎಸ್. ವಿ. ಭಟ್, ವಿ. ಜಿ. ಶೆಟ್ಟಿ ಹಾಗೂ ಪೆರ್ಲ ರಾಜಾರಾಮ್ ಭಟ್ ಸಭೆಯಲ್ಲಿ ಉಪಸ್ಥಿತರಿದ್ದರು. ಬಳಿಕ ಶ್ರೀ ಕೃಷ್ಣ ಸಂಧಾನ ತಾಳಮದ್ದಲೆ ಸಂಪನ್ನಗೊ0ಡಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments