ತಾಳಮದ್ದಲೆ ಸಪ್ತಾಹದ ಅಂಗವಾಗಿ 3ನೇ ದಿನ ಬನ್ನಂಜೆ ಶ್ರೀ ಶಿವಗಿರಿ ಸಭಾಭವನದಲ್ಲಿ ಹರ್ಷ ಸಮೂಹ ಸಂಸ್ಥೆಯ ಮುಖ್ಯಸ್ಥರಾದ ಸೂರ್ಯಪ್ರಕಾಶ್ ಅವರು 23-05-2023ರಂದು ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಬನ್ನಂಜೆ ಬಿಲ್ಲವರ ಸೇವಾ ಸಂಘದ ಕಾರ್ಯದರ್ಶಿ ಆನಂದ ಪೂಜಾರಿ ಹಾಗೂ ಕಲಾರಂಗದ ಉಪಾಧ್ಯಕರುಗಳಾದ ಎಸ್. ವಿ.ಭಟ್, ಕಿಶನ್ ಹೆಗ್ಡೆ, ಜತೆ ಕಾರ್ಯದರ್ಶಿಗಳಾದ ನಾರಾಯಣ ಎಂ. ಹೆಗಡೆ, ಎಚ್. ಎನ್. ಶೃಂಗೇಶ್ವರ, ಕಾರ್ಯದರ್ಶಿ ಮುರಲಿ ಕಡೆಕಾರ್ ಉಪಸ್ಥಿತರಿದ್ದರು.
ಗಣೇಶ್ ಬ್ರಹ್ಮಾರ ಕಾರ್ಯಕ್ರಮ ನಿರೂಪಿಸಿದರು. ನಂತರ ತಾಳಮದ್ದಲೆ ವಾಮನ ಚರಿತ್ರೆ ಪ್ರಸ್ತುತಗೊಂಡಿತು.