ಕಟೀಲು ಕ್ಷೇತ್ರದಲ್ಲಿ ಮೇ 26ರಂದು ಈ ವರ್ಷದ ತಿರುಗಾಟದ ಕೊನೆಯ ಸೇವೆಯಾಟದ ಅಂಗವಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳ ಯಕ್ಷಗಾನ ಪ್ರದರ್ಶನ ನಡೆಯಲಿದೆ.


26.05.2023ರಂದು ಸಂಜೆ 7 ಘಂಟೆಯಿಂದ ಮರುದಿನ ಬೆಳಿಗ್ಗಿನ ವರೆಗೆ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಸಂಜೆ ಏಳು ಘಂಟೆಗೆ ಆರಂಭವಾಗಲಿರುವ ಯಕ್ಷಗಾನ ಪ್ರದರ್ಶನದಲ್ಲಿ ಆರು ಮೇಳಗಳ ಕಲಾವಿದರಿಂದ ವಿದ್ಯುನ್ಮತಿ ಕಲ್ಯಾಣ, ಮೀನಾಕ್ಷಿ ಕಲ್ಯಾಣ, ರತಿ ಕಲ್ಯಾಣ, ಶ್ರೀನಿವಾಸ ಕಲ್ಯಾಣ ಎಂಬ ಪ್ರಸಂಗಗಳು ಪ್ರಸ್ತುತಿಗೊಳ್ಳಲಿವೆ ಎಂದು ಮಂಡಳಿಯ ಪ್ರಕಟಣೆ ತಿಳಿಸಿದೆ.
