ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್ ಕೋಟದ ಹಂದೆ ಮಹಾ ಗಣಪತಿ ದೇವಸ್ಥಾನದಲ್ಲಿ ಇದೇ ಎಪ್ರಿಲ್ 30 ರಿಂದ 6 ರವರೆಗೆ ಬೇಸಗೆ ಶಿಬಿರದ ಪ್ರಯುಕ್ತ ಒಂದು ವಾರಗಳ ಕಾಲ ನರಸಿಂಹ ಸೋಮಯಾಜಿ ಹಂದಟ್ಟು, ಶ್ರೀ ವಿಶ್ವ ವಿನಾಯಕ ವಿವಿಧೋದ್ದೇಶ ಸಹಕಾಎ ಸಂಘ (ರಿ) ಕೋಟ, ಹಂದಟ್ಟು ಹಾಲು ಉತ್ಪಾದಕರ ಮಹಿಳಾ ಸಂಘ, ಕಾಮಧೇನು ವಿವಿಧೊದ್ದೇಶ ಸಹಕಾರಿ ಸಂಘ ಹಂದ್ಟಟು, ರಂಗ ಸಂಪದ ಕೋಟ, ಸಾಲಿಗ್ರಾಮ ಮಕ್ಕಳ ಮೇಳ, ಯಶಸ್ವಿ ಕಲಾವೃಂದ ತೆಕ್ಕಟ್ಟೆ ಮತ್ತು ವ್ಯವಸ್ಥಪನಾ ಸಮಿತಿ ಹಂದೆ ದೇವಸ್ಥಾನದದೊ0ದಿಗೆ ಜ0ಟಿಯಾಗಿ ಆಯೋಜಿಸಿದ ಯಕ್ಷಗಾನ ನೃತ್ಯ, ಭಾಗವತಿಕೆ, ಪದ್ಯದೊಂದಿಗೆ ತಾಳಾಭ್ಯಾಸ ಶಿಬಿರವನ್ನು ಚಂಡೆ ನುಡಿಸಿ ಸುಜಯೀಂದ್ರ ಹಂದೆಯವರು ಉದ್ಘಾಟಿಸಿದರು.


ಯಕ್ಷಾಂಗಣ ಟ್ರಸ್ಟ್ ನ ಸಂಘಟನಾ ಕಾರ್ಯದರ್ಶಿ ಸುದರ್ಶನ ಉರಾಳರು ಅಧ್ಯಕ್ಷತೆ ವಹಿಸಿದ್ದರು. ಕೋಟ ಹಂದೆ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರೂ, ಮುಕ್ತೇಸರರು ಆದ ಅಮರ ಹಂದೆ ಶುಭಾಶಂಸನೆಗೈದರು. ಯಕ್ಷಗುರು ಲ0ಬೋದರ ಹೆಗಡೆ ಉಪಸ್ಥಿತರಿದ್ದರು.
ರಂಗ ಸಂಪದದ ಕೋಟ ರಾಘವೇ0ದ್ರ ತು0ಗ ಸ್ವಾಗತಿಸಿ, ಯಶಸ್ವೀ ಕಲಾವೃಂದದ ವೆಂಕಟೇಶ ವೈದ್ಯ ವಂದಿಸಿದರು.
ಸಾಲಿಗ್ರಾಮ ಮಕ್ಕಳ ಮೇಳದ ಸುಹಾಸ ಕರಬ ಕಾರ್ಯಕ್ರಮ ನಿರ್ವಹಿಸಿದರು. ಸುದರ್ಶನ ಉರಾಳ, ಸುಜಯೀಂದ್ರ ಹಂದೆ, ಲಂಬೋದರ ಹೆಗಡೆ, ಸುಹಾಸ ಕರಬ ಶಿಬಿರದ ಗುರುಗಳಾಗಿ, ಸುದೀಪ ಉರಾಳ, ಮನೋಜ್ ಆಚಾರ್, ಶಶಾಂಕ್, ಸ್ಕಂದ ಉರಾಳ ಹಿಮ್ಮೇಳವಾದಕರಾಗಿ ಸಹಕರಿಸಿದರು.
ವರದಿ-
ಸುದರ್ಶನ ಉರಾಳ ಹಂದಟ್ಟು ಕೋಟ.
9448547237