ಇಂದು ಆದಿತ್ಯವಾರ, ದಿನಾಂಕ 16.04.2023ರಂದು ಸಂಜೆ ಘಂಟೆ 5.45ರಿಂದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಠಾರದಲ್ಲಿ ‘ಭಾರತ ರತ್ನ, ಗಿರಿಜಾ ಕಲ್ಯಾಣ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.


ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ನಡೆಯಲಿರುವ ಈ ಪ್ರದರ್ಶನವು ಸಂಜೆ ಘಂಟೆ 5.45ಕ್ಕೆ ಆರಂಭವಾಗಲಿದ್ದು ರಾತ್ರಿ ಘಂಟೆ 12.30ರ ತನಕ ನಡೆಯಲಿದೆ.
ಸಂಜೆ ಘಂಟೆ 5.45ಕ್ಕೆ ಚೌಕಿ ಪೂಜೆ ನೆರವೇರಲಿದೆ. ರಾತ್ರಿ ಘಂಟೆ 7.30ಕ್ಕೆ ಅನ್ನಸಂತರ್ಪಣೆ ಆರಂಭವಾಗಲಿದೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ಕಲಾಭಿಮಾನಿಗಳನ್ನು ಯಕ್ಷಗಾನದ ಸೇವಾಕರ್ತರು ಆದರದಿಂದ ಆಮಂತ್ರಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಮೇಲಿನ ಕರಪತ್ರದ ಚಿತ್ರವನ್ನು ಗಮನಿಸಿ.