ಕೇಳಿದಷ್ಟು ವರದಕ್ಷಿಣೆ ನೀಡದ ಕಾರಣ ಸೊಸೆಯನ್ನು ಮನೆ ಬಿಟ್ಟು ಹೋಗುವಂತೆ ಹೇಳಿ ವ್ಯಕ್ತಿಯೊಬ್ಬ ದೊಣ್ಣೆಯಿಂದ ಥಳಿಸಿದ ಘಟನೆ ನಡೆದಿದೆ.

ಪರಶುವಕ್ಕಲ್‌ನ ಕಿಳಕ್ಕೆ ಪುತ್ತನ್ ವೇದಿಕೆಯ ಸ್ಟೀಫನ್ ಎಂಬುವರ ಪತ್ನಿ ಎ.ಎಲ್.ಪ್ರೇಮಲತಾ (42) ಅವರಿಗೆ ಮಾವ ರಾಮಚಂದ್ರನ್ (68) ಥಳಿಸಿದ್ದಾರೆ.

ಪ್ರೇಮಲತಾ ಅವರ 14 ವರ್ಷದ ಕಿರಿಯ ಮಗ ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದ ದೃಶ್ಯಾವಳಿಯಿಂದ ಈ ಘಟನೆ ಹೊರಬಿದ್ದಿದೆ. ದೃಶ್ಯಗಳ ಸಮೇತ ಪ್ರೇಮಲತಾ ಪೊಲೀಸರಿಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ರಾಮಚಂದ್ರನನ್ನು ವಶಕ್ಕೆ ಪಡೆದಿದ್ದಾರೆ.
ದೃಶ್ಯಗಳಲ್ಲಿ ಪ್ರೇಮಲತಾ ಅವರ ಮುಖಕ್ಕೆ ಪದೇ ಪದೇ ಕಪಾಳಮೋಕ್ಷ ಮಾಡಿದ್ದು, ರಾಮಚಂದ್ರನ್ ದೊಣ್ಣೆಯಿಂದ ಥಳಿಸಿದ್ದಾರೆ.