ಹಾದಿಗಲ್ಲು ಶ್ರೀ ಅಭಯಲಕ್ಷ್ಮಿ ನರಸಿಂಹ ದೇವಾಲಯದ ವರ್ಧಂತ್ಯುತ್ಸವದ ಪ್ರಯುಕ್ತ 11-04-2023ರಂದು ಜರಗಿದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕಲಾ ಕಾರ್ಯಕ್ರಮದಲ್ಲಿ ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿ ಅಂಬಲಪಾಡಿ (ಅಧ್ಯಕ್ಷ ಕೆ. ಅಜಿತ್‌ಕುಮಾರ್)


ಹಾಗೂ ಹಿರಿಯ ಯಕ್ಷಗಾನ ಕಲಾವಿದ ಶಿವಶಂಕರ ಕೆ.ಎಸ್. ಭಟ್ ಇವರಿಗೆ ತಲಾ ರೂ.10,000/- ಹಮ್ಮಿಣಿಯೊಂದಿಗೆ ‘ಶ್ರೀವಾದಿರಾಜಾನುಗ್ರಹ’ ಪ್ರಶಸ್ತಿಯನ್ನು ದೇವಳದ ಧರ್ಮದರ್ಶಿ ಹಾದಿಗಲ್ಲು ಲಕ್ಷ್ಮೀನಾರಾಯಣರು ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಪದಾಧಿಕಾರಿಗಳಾದ ಎಸ್. ವಿ.ಭಟ್, ಮುರಲಿ ಕಡೆಕಾರ್ ನಾರಾಯಣ ಎಂ. ಹೆಗಡೆ ಹಾಗೂ ಭಾಗವತರಾದ ಕೆ.ಜೆ. ಗಣೇಶ್ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ನರಸಿಂಹ ತುಂಗರ ನಿರ್ದೇಶನದಲ್ಲಿ ಅಂಬಲಪಾಡಿ ಲಕ್ಷ್ಮೀಜನಾರ್ದನ ಯಕ್ಷಗಾನ ಮಂಡಳಿಯ ಬಾಲಕಲಾವಿದರಿಂದ ‘ಮಾಯಾಪುರಿ ಮಹಾತ್ಮೆ’ ಯಕ್ಷಗಾನ ಪ್ರಸ್ತುತಗೊಂಡಿತು.