ಮದ್ಯದ ಅಮಲಿನಲ್ಲಿ ಸಮವಸ್ತ್ರದಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಅವರನ್ನು ಅಮಾನತು ಮಾಡಲಾಗಿದೆ.

ಸ್ಪೆಷಲ್ ಬ್ರಾಂಚ್ ವರದಿಯ ಮೇರೆಗೆ ಇಡುಕ್ಕಿಯ ಸಂತನಪಾರ ಹೆಚ್ಚುವರಿ ಸಬ್ ಇನ್ಸ್‌ಪೆಕ್ಟರ್ ಕೆಪಿ ಶಾಜಿ ಅವರನ್ನು ಅಮಾನತುಗೊಳಿಸಲಾಗಿದೆ.

ಪೂಪ್ಪಾರ ಬಳಿ ದೇವಸ್ಥಾನದ ಉತ್ಸವದಲ್ಲಿ ಅಧಿಕಾರಿಯೊಬ್ಬರು ಡ್ಯಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದು ವೈರಲ್ ಆದ ನಂತರ ಸ್ಪೆಷಲ್ ಬ್ರಾಂಚ್ ತನಿಖೆ ನಡೆಸಿ ವರದಿ ಸಲ್ಲಿಸಿತ್ತು.
ಅವರ ಅಮಾನತಿಗೆ ಪ್ರಮುಖ ಕಾರಣವೆಂದರೆ ಅವರು ಕರ್ತವ್ಯದಲ್ಲಿದ್ದಾಗ ಸಾರ್ವಜನಿಕರ ಮುಂದೆ ಡ್ಯಾನ್ಸ್ ಮಾಡಿದ್ದೇ ಕಾರಣ.