ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನವು ಮಂಗಳೂರಿನ ನೆಡ್ಲೆ ನರಸಿಂಹ ಭಟ್ಟ ಪ್ರತಿಷ್ಠಾನದ ಸಹಯೋಗದೊಂದಿಗೆ ಮುಂಬಯಿಯಲ್ಲಿ ಮೂರುದಿನಗಳ ತಾಳಮದ್ದಳೆ ಸರಣಿಯನ್ನು ಆಯೋಜಿಸಿದೆ.

ಈ ಮೂರುದಿನಗಳಲ್ಲಿ ಕೃಷ್ಣ ಸಂಧಾನ, ವಾಲಿ ವಧೆ, ಮಾಗಧ ವಧೆ ಎಂಬ ಪ್ರಸಂಗಗಳ ತಾಳಮದ್ದಳೆ ಕೂಟ ಮುಂಬಯಿಯ ವಿವಿಧ ಸ್ಥಳಗಳಲ್ಲಿ ನಡೆಯಲಿದೆ.

ಈ ಸಂದರ್ಭದಲ್ಲಿ ಭಾಗವತ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟೆಯವರಿಗೆ ‘ಕುರಿಯ ವಿಠಲ ಶಾಸ್ತ್ರಿ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಸಂಘಟಕರು ಮುಂಬಯಿಯ ಕಲಾಭಿಮಾನಿಗಳನ್ನು ಕಾರ್ಯಕ್ರಮಕ್ಕೆ ಆದರದಿಂದ ಸ್ವಾಗತಿಸಿದ್ದಾರೆ.
ಕಾರ್ಯಕ್ರಮದ ಸಂಪೂರ್ಣ ವಿವರಗಳಿಗೆ ಮೇಲಿನ ಕರಪತ್ರದ ಚಿತ್ರವನ್ನು ನೋಡಿ.