ಗಂಡ ಚಾಕೊಲೇಟ್ ತಂದು ಕೊಡಲಿಲ್ಲ ಎಂಬ ಕಾರಣಕ್ಕೆ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪ್ರೀತಿಯ ಗಂಡ ಚಾಕ್ಲೇಟ್ (Chocklate) ತಂದು ಕೊಟ್ಟಿಲ್ಲವೆಂದು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನ ಹೆಣ್ಣೂರಿನಲ್ಲಿ ನಡೆದ ಬಗ್ಗೆ ವರದಿಯಾಗಿದೆ.

ಚಿಕ್ಕ ಮಕ್ಕಳು ಚಾಕೋಲೆಟ್, ತಿಂಡಿ ತಿನಿಸುಗಳಿಗೆ ಹಠ ಹಿಡಿಯುವುದು, ಅಳುವುದು ಸಾಮಾನ್ಯ ಆದರೆ ಎರಡು ಮಕ್ಕಳ ತಾಯಿಯಾದ ನಂದಿನಿ ಎಂಬಾಕೆ, ಪತಿ ಚಾಕೊಲೇಟ್ ತಂದು ಕೊಡಲಿಲ್ಲ ಎಂದು ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 6 ವರ್ಷದ ಹಿಂದೆ ಮದುವೆಯಾಗಿದ್ದ ಮೃತ ನಂದಿನಿಗೆ ಇಬ್ಬರು ಮಕ್ಕಳಿದ್ದಾರೆ. ನಂದಿನಿ ಪತಿ ಸಲೂಲ್ನಲ್ಲಿ ಕೆಲಸ ಮಾಡಿಕೊಂಡಿದ್ದ.

ನಿನ್ನೆ ಬೆಳಗ್ಗೆ ಪತಿ ಕೆಲಸಕ್ಕೆ ಹೋಗುವಾಗ ಚಾಕೋಲೆಟ್ ತೆಗೆದುಕೊಂಡು ಬರುವಂತೆ ಕೇಳಿದ್ದಳು. ಮಧ್ಯಾಹ್ನವಾದರೂ ಪತಿ ಚಾಕೋಲೆಟ್ ತಂದು ತೆಗೆದುಕೊಂಡು ಬರಲಿಲ್ಲ. ಅಲ್ಲದೇ ಫೋನ್ ಮಾಡಿದ್ದರೂ ಗಂಡ ಕರೆ ಸ್ವೀಕರಿಸಿರಲಿಲ್ಲ. ಇದರಿಂದ ಮನನೊಂದು ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ.
ಗಂಡ ಮನೆಗೆ ಬಂದು ನೋಡಿದಾಗ ನಂದಿನಿ ನೇಣು ಹಾಕಿಕೊಂಡಿರುವುದು ಅರಿವಾಗಿ ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲಾಗಲೇ ನಂದಿನಿ ಮೃತಪಟ್ಟಿದ್ದಳು. ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ., ನಂದಿನಿಗೆ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.