ಶ್ರೀ ಬಾಲಸುಬ್ರಮಣ್ಯ ಸ್ವಾಮಿ ದೇವಾಲಯ ಇಚ್ಚುರೂ ಕಾಲಾವಧಿ ಉತ್ಸವದ ಪ್ರಯುಕ್ತ ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾ ಸೇವಾ ಸಂಘ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ‘ದೇವಸೇನಾನೀ’ ತಾಳಮದ್ದಳೆ ಜರಗಿತು.

ಭಾಗವತರಾಗಿ ಭರತರಾಜ್ ಶೆಟ್ಟಿ ಸಿದ್ದಕಟ್ಟೆ, ನೀತೇಶ್ ಕುಮಾರ್, ಹಿಮ್ಮೇಳದಲ್ಲಿ ಲಕ್ಷ್ಮೀಶ ಅಮ್ಮಣ್ಣಾಯ, ಶ್ರೀಪತಿ ಭಟ್ ಉಪ್ಪಿನಂಗಡಿ, ಗುರುಮೂರ್ತಿ ಅಮ್ಮಣ್ಣಾಯ, ತೇಜಸ್ ಬಲ್ಲಾಲ್ ಕೌಡಂಬಾಡಿ ಭಾಗವಹಿಸಿದ್ದರು.


ಅರ್ಥಧಾರಿಗಳಾಗಿ ದಿವಾಕರ ಆಚಾರ್ಯ ಗೇರುಕಟ್ಟೆ(ದೇವೇಂದ್ರ) ಮಹಾಲಿಂಗೇಶ್ವರ ಭಟ್ ಪೆರಿಯಡ್ಕ(ಈಶ್ವರ) , ಗುಡ್ದಪ್ಪ ಬಲ್ಯ (ತಾರಕಾಸುರ) ಹರೀಶ್ ಆಚಾರ್ಯ ಬಾರ್ಯ(ಮನ್ಮಥ), ಶ್ರೀಮತಿ ಪೂರ್ಣಿಮಾ ಎಸ್. ಪುತ್ತೂರಾಯ (ಪಾರ್ವತಿ) ಶ್ರೀಮತಿ ಜ್ಯೋತಿ ಶೈಲೇಶ್ (ಷಣ್ಮುಖ) ಭಾಗವಹಿಸಿದ್ದರು.
ಶ್ರೀ ಸುರೇಶ್ ಪುತ್ತೂರಾಯ ಸ್ವಾಗತಿಸಿ ವಂದಿಸಿದರು. ಸುರೇಶ್ ಪುತ್ತೂರಾಯ, ಲಕ್ಷ್ಮೀಶ ಅಮ್ಮಣ್ಣಾಯ, ಪಿ. ಸೂರ್ಯನಾರಾಯಣ ಪುತ್ತೂರಾಯ, ಜಯಪ್ರಸಾದ್ ಯೆನ್ಮಾಡಿ ಕಲಾವಿದರನ್ನು ಶಾಲು, ಪ್ರಸಾದ ನೀಡಿ ಗೌರವಿಸಿದರು.