ಕಟೀಲು ಶ್ರೀದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಕಲಾಮಂಡಳಿಯವರಿಂದ 28ನೇ ವರ್ಷದ ಸೇವಾ ಬಯಲಾಟವಾಗಿ “ಚಿತ್ರಸೇನ ಕಾಳಗ, ದುಶ್ಶಾಸನ ವಧೆ, ರಕ್ತರಾತ್ರಿ” ಯಕ್ಷಗಾನ ಬಯಲಾಟ ತಾ.15.04.2023ನೇ ಶನಿವಾರ ಸಂಜೆ ಗಂಟೆ 6.00ಕ್ಕೆ ಕನ್ಯಾನದ ಸರಸ್ವತೀ ವಿದ್ಯಾಲಯದ ವಠಾರದಲ್ಲಿ ನಡೆಯಲಿದೆ.
ಈ ಸಂದರ್ಭದಲ್ಲಿ ಸಂಜೆ 5.30ಗಂಟೆಗೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಶ್ರೀಗಳಾದ – ಜಿನ್ನಪ್ಪ ನಾಯ್ಕ ಪೆರ್ನೆಮೊಗರು (ಮಾಜಿ ಯೋಧ), ದೇವಸ್ಯ ಕುಂಙ್ಙಣ್ಣಶೆಟ್ಟಿ (ದೈವಪಾತ್ರಿ), ಗಂಗಯ್ಯ ನಲಿಕೆ ಮರ್ತನಾಡಿ (ದೈವನರ್ತಕ), ಎಂ.ಟಿ.ಎಸ್. ಕುಲಾಲ್ (ಯಕ್ಷಗಾನ ಹಾಗೂ ಚಲನಚಿತ್ರ ನಟ) ಇವರನ್ನು ಸನ್ಮಾನಿಸಿ ಗೌರವಿಸಲಾಗುವುದು. ವಿವರಗಳಿಗೆ ಮೇಲಿನ ವೀಡಿಯೊವನ್ನು ನೋಡಿ
