ಕೆಎಸ್‌ಆರ್‌ಟಿಸಿಯಲ್ಲಿ ವೇತನ ವಿತರಣೆ ವಿಳಂಬ ಖಂಡಿಸಿ ಬ್ಯಾಡ್ಜ್ ಧರಿಸಿ ಪ್ರತಿಭಟನೆ ನಡೆಸಿದ ಮಹಿಳಾ ಕಂಡಕ್ಟರ್‌ರನ್ನು ವರ್ಗಾವಣೆ ಮಾಡಲಾಗಿದೆ.
ಅಖಿಲಾ ಬ್ಯಾಡ್ಜ್ ಧರಿಸಿ ಪ್ರತಿಭಟನೆ ನಡೆಸುತ್ತಿರುವ ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅಖಿಲಾ ಅವರು ‘ಸಂಬಳ ರಹಿತ ಸೇವೆ 44ನೇ ದಿನ’ ಎಂಬ ಬ್ಯಾಡ್ಜ್ ಧರಿಸಿದ್ದರು.
ಕೆಎಸ್‌ಆರ್‌ಟಿಸಿ ವೈಕಂ ಡಿಪೋದಲ್ಲಿ ಕಂಡಕ್ಟರ್ ಆಗಿದ್ದ ಅಖಿಲಾ ಸಿ ನಾಯರ್ ಅವರನ್ನು ಪಾಲಾ ಡಿಪೋಗೆ ವರ್ಗಾವಣೆ ಮಾಡಲಾಗಿದೆ.
ವರ್ಗಾವಣೆ ಆದೇಶದಲ್ಲಿ ಸರ್ಕಾರ ಮತ್ತು ಕೆಎಸ್‌ಆರ್‌ಟಿಸಿಗೆ ಮಾನಹಾನಿ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದ್ದು, ಈ ಕಾರಣಕ್ಕೆ ಕ್ರಮ ಕೈಗೊಳ್ಳಲಾಗಿದೆ.