ದಿನಾಂಕ 29.03.2023 ಬುಧವಾರದಂದು ಸಂಜೆ 5 ಘಂಟೆಗೆ ಸರಿಯಾಗಿ ಕೆಯ್ಯೂರು ಮಾಡಾವು ಸಮೀಪದ ಅಂಕತಡ್ಕ ಪೂಂಜಿರೋಟು ಶ್ರೀ ಬ್ರಹ್ಮ ಬೈದೆರುಗಳ ನೇತ್ರಾವತಿ ಗರಡಿಯಲ್ಲಿ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಪ್ರದರ್ಶಿಸಲ್ಪಡುವ, ಯೋಗೀಶ್ ರೈ ಮಣಿಕ್ಕಾರ ಚೇತನ್ ಕುಮಾರ್ ರೈ ಐವತ್ತೊಕ್ಲು ಇವರಿಂದ ಸೇವಾರೂಪವಾಗಿ ಈ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಸಂಜೆ 5.45ಕ್ಕೆ ಚೌಕಿ ಪೂಜೆ ಮತ್ತು ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.