ಕರಾಡ ಬ್ರಾಹ್ಮಣ ಸಮಾಜ(ರಿ)ಬೆಳ್ತಂಗಡಿ ವತಿಯಿಂದ ಸೋಮಂತಡ್ಕದ ಸಮೃದ್ಧಿ ಕರಾಡ ಭವನದಲ್ಲಿ ದಿ. ವಿಜಯ ರಾಘವ ಪಡುವೆಟ್ನಾಯ ಮತ್ತು ದಿ. ಬಲಿಪ ನಾರಾಯಣ ಭಾಗವತರಿಗೆ ನುಡಿ ನಮನ ಕಾರ್ಯಕ್ರಮ ಜರಗಿತು.
ಸಾಮಾಜಿಕ ,ಧಾರ್ಮಿಕ ಸಾಂಸ್ಕೃತಿಕ ಮತ್ತು ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪಡುವೆಟ್ನಾಯರು ಮತ್ತು ತೆಂಕುತಿಟ್ಟು ಯಕ್ಷಗಾನದಲ್ಲಿ ಆರು ದಶಕಗಳ ಕಾಲ ಕಲಾ ಸೇವೆ ಮಾಡಿ ಭಾಗವತ ಭೀಷ್ಮರಂದೇ ಖ್ಯಾತರಾದ ನಾರಾಯಣ ಭಾಗವತರ ಬಗ್ಗೆ ಧರ್ಮಸ್ಥಳದ ಜಮಾ ಉಗ್ರಾಣದ ನಿವೃತ್ತ ಮುತ್ಸದ್ದಿ ಮತ್ತು ಕಲಾಸಂಘಟಕ ಭುಜಬಲಿ ಧರ್ಮಸ್ಥಳ ಮತ್ತು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ದಿವಾಕರ ಆಚಾರ್ಯ ಗೇರುಕಟ್ಟೆ ಅವರ ಸಾಧನೆಗಳನ್ನು ಸ್ಮರಿಸಿ ನುಡಿ ನಮನ ಸಲ್ಲಿಸಿದರು.
ಪದ್ವೆಟ್ನಾಯರು ಸರಳತೆ ಮತ್ತು ಕಾರ್ಯ ಶೈಲಿಯಿಂದ ಗಳಿಸಿದ ಗೌರವವನ್ನು ಉಳಿಸಿ ಮುಂದುವರಿಸಲು ಪ್ರಯತ್ನಿಸುವುದಾಗಿ ಅವರ ಪುತ್ರ ಉಜಿರೆ ಜನಾರ್ದನ ದೇವಳದ ಅನುವಂಶಿಕ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ತಿಳಿಸಿ ಮೊದಲ ಯಕ್ಷಜನ ಪ್ರಶಸ್ತಿಯನ್ನು ಬಲಿಪ ಭಾಗವತರಿಗೆ ಅವರ ಗೃಹದಲ್ಲಿಯೆ ಪ್ರದಾನಿಸಿ ಕ್ಷೇತ್ರದ ವತಿಯಿಂದ ಗೌರವಿಸಲಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರಾಡ ಬ್ರಾಹ್ಮಣ ಸಮಾಜದ ಅಧ್ಯಕ್ಷ ಡಾ. ಪ್ರದೀಪ್ ಕುಮಾರ್ ನಾವೂರು ಸಮಾಜ ಮತ್ತು ಕಲಾಸೇವೆಯಲ್ಲಿ ಮಹಾನ್ ಸಾಧನೆ ಮಾಡಿದ ಮಹನೀಯರಿಬ್ಬರ ಆದರ್ಶಗಳು ನಮಗೆ ದಾರಿದೀಪವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಬಲಿಪ ನಾರಾಯಣ ಭಾಗವತರ ಸಹೋದರಿ ವಿದ್ಯಾಭಟ್ ,ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ ರಾವ್, ಯಕ್ಷಭಾರತಿ ಅಧ್ಯಕ್ಷ ರಾಘವೇಂದ್ರ ಭೈಪಾಡಿತ್ತಾಯ ಮೊದಲಾದವರು ಉಪಸ್ಥಿತರಿದ್ದರು.
ಉಪನ್ಯಾಸಕಿ ಕಾವ್ಯ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಬಳಿಕ ವಿಷ್ಣು ಭಟ್ ಧರ್ಮಸ್ಥಳ ಇವರ ಪ್ರಾಯೋಜಕತ್ವದಲ್ಲಿ ಯಕ್ಷಭಾರತಿ ಕನ್ಯಾಡಿ ಸದಸ್ಯರಿಂದ ಶ್ರೀರಾಮ ಪರಂಧಾಮ ತಾಳಮದ್ದಳೆ ಜರಗಿತು.
ಭಾಗವತರಾಗಿ ಮಹೇಶ್ ಕನ್ಯಾಡಿ ಹಿಮ್ಮೇಳದಲ್ಲಿ ಶ್ರೇಯಸ್ ಪಾಳ೦ದೆ, ಸುಂದರ ದೇವಾಡಿಗ ಧರ್ಮಸ್ಥಳ ಅರ್ಥದಾರಿಗಳಾಗಿ ಸುರೇಶ್ ಕುದ್ರೆಂತ್ತಾಯ ಉಜಿರೆ, ಹರಿದಾಸ್ ಗಾಂಭೀರ್ ಧರ್ಮಸ್ಥಳ, ದಿವಾಕರ ಆಚಾರ್ಯ ಗೇರುಕಟ್ಟೆ, ಸದಾನಂದ ಮುಂಡಾಜೆ, ಶಶಿಧರ ಕನ್ಯಾಡಿ, ಭವ್ಯ ಹೊಳ್ಳ ಉಜಿರೆ ಭಾಗವಹಿಸಿದ್ದರು.
ಕಾರ್ಯಕ್ರಮದ ಪ್ರಾಯೋಜಕರಾದ ಶ್ರೀಮತಿ ಮಮತಾ ವಿಷ್ಣು ಭಟ್ ಧರ್ಮಸ್ಥಳ ಮತ್ತು ಡಾ.ಪ್ರದೀಪ್ ಕುಮಾರ್ ನಾವೂರು ಇವರನ್ನು ಯಕ್ಷ ಭಾರತಿ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು
- ಕಾಸರಗೋಡಿನ ಮಸೀದಿ ಪರಿಸರದ ಮಣ್ಣು ತೆಗೆದ ಜೆಸಿಬಿಗೆ 45 ಲಕ್ಷ ದಂಡ; ಬಡ ಕುಟುಂಬ ಸಂಕಷ್ಟದಲ್ಲಿ – ಕಬ್ರಿಸ್ತಾನ್ ಭೂಮಿಯ ಉಸ್ತುವಾರಿ ಮಸೀದಿ ಅಧಿಕಾರಿಗಳಿಗೆ ಶಿಕ್ಷೆ ಇಲ್ಲ