Friday, November 22, 2024
Homeಸುದ್ದಿಯಕ್ಷಗಾನ ಗುರು ಕೇಶವ ಆಚಾರ್ಯರಿಗೆ ನೆರವು 

ಯಕ್ಷಗಾನ ಗುರು ಕೇಶವ ಆಚಾರ್ಯರಿಗೆ ನೆರವು 

ಕಳೆದ ಒಂದು ದಶಕದಿಂದ ಯಕ್ಷಶಿಕ್ಷಣ ಟ್ರಸ್ಟ್ ನ ಅಭಿಯಾನದಲ್ಲಿ ಗುರುಗಳಾಗಿ, ಭಾಗವತರಾಗಿ ಸೇವೆ ಸಲ್ಲಿಸುತ್ತಾ ಬಂದ ಕೇಶವ ಆಚಾರ್ಯ ಇವರಿಗೆ ಎರಡು ತಿಂಗಳ ಹಿಂದೆ ಯಕ್ಷಗಾನ ತರಬೇತಿಯಿಂದ ಹಿಂತಿರುಗಿ ಮನೆಗೆ ಬರುವ ಸಂದರ್ಭದಲ್ಲಿ ವಾಹನ ಅಪಘಾತವಾಗಿ ಕುತ್ತಿಗೆಯ ಭಾಗದ ನರಕ್ಕೆ ತೀವ್ರವಾದ ಆಘಾತವಾಗಿ, ತೀರಾ ಅಸೌಖ್ಯದಲ್ಲಿದ್ದಾರೆ.

ಇವರಿಗೆ ಶಾಸಕರೂ, ಯಕ್ಷ ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷರೂ ಆದ ಕೆ.ರಘುಪತಿ ಭಟ್ 15-3-2023 ರಂದು ಹೇರಂಜೆಯಲ್ಲಿರುವ ಅವರ ಮನೆಗೆ ತೆರಳಿ ಟ್ರಸ್ಟ್ ವತಿಯಿಂದ ಒಂದು ಲಕ್ಷ ರೂಪಾಯಿ ವೈದ್ಯಕೀಯ ನೆರವನ್ನು ನೀಡಿದರು. ಮುಂದೆಯೂ ನಿಮ್ಮೊಂದಿಗೆ ನಾವಿದ್ದೇವೆ ಎಂದು ಭರವಸೆ ನೀಡಿದರು. ಕಳೆದ ವರ್ಷ ನಾಲ್ಕುಶಾಲೆಗಳಲ್ಲಿ ಗುರುಗಳಾಗಿ ಸೇವೆ ಸಲ್ಲಿಸಿದ್ದನ್ನು ಕೃತಜ್ಞತೆಯಿಂದ ಸ್ಮರಿಸಿಕೊಂಡರು.

ಹಂಗಾರಕಟ್ಟೆ ಯಕ್ಷಗಾನ ಕೇಂದ್ರ ಮತ್ತು ಉಡುಪಿ, ಬ್ರಹ್ಮಾವರದ ಸುತ್ತಮುತ್ತಲ ಹಲವಾರು ಸಂಘಗಳಲ್ಲಿ ನೃತ್ಯ ಗುರುಗಳಾಗಿ, ಭಾಗವತರಾಗಿ ಸೇವೆ ಸಲ್ಲಿಸುತ್ತಾ ಬಂದ ಕೇಶವಾಚಾರ್ಯರ ನಿಸ್ಪೃಹ ಸೇವೆಯನ್ನು ಟ್ರಸ್ಟ್ ಸದಾ ಸ್ಮರಿಸುತ್ತದೆ.

ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಉಪಾಧ್ಯಕ್ಷರಾದ ಎಸ್. ವಿ.ಭಟ್, ವಿ.ಜಿ. ಶೆಟ್ಟಿ, ನಾರಾಯಣ ಎಂ. ಹೆಗಡೆ, ಬಿ. ಭುವನಪ್ರಸಾದ್ ಹೆಗ್ಡೆ, ನರಸಿಂಹ ತುಂಗಾ, ರಘುರಾಮ್ ಬೈಕಾಡಿ ಉಪಸ್ಥಿತರಿದ್ದರು.

ಆಚಾರ್ಯರ ಇಬ್ಬರು ಪುತ್ರಿಯರು (ಇಬ್ಬರೂ ಎಸ್. ಎಸ್.ಎಲ್.ಸಿ.ಯಲ್ಲಿ 95% ಕ್ಕಿಂತ ಹೆಚ್ಚು ಅಂಕಗಳಿಸಿದ್ದಾರೆ) ವಿದ್ಯಾಪೋಷಕ್‌ನಲ್ಲಿ ಫಲಾನುಭವಿಗಳಾಗಿದ್ದಾರೆ. ಇವರ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ವಿದ್ಯಾಪೋಷಕ್‌ ಭರಿಸುತ್ತದೆ ಎಂದು ಕಾರ್ಯದರ್ಶಿ ಮುರಳಿ ಕಡೆಕಾರ್ ಈ ಸಂದರ್ಭದಲ್ಲಿ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments