ಒಳ ಉಡುಪಿನಲ್ಲಿ 1 ಕೋಟಿ ಮೌಲ್ಯದ ಚಿನ್ನಾಭರಣ ಸಾಗಿಸುತ್ತಿದ್ದ ಮಹಿಳೆಯೊಬ್ಬರನ್ನು ಕರಿಪುರ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಕೋಝಿಕ್ಕೋಡ್ ನರಿಕ್ಕುನ್ನಿಯ ಕಂದನ್‌ಪ್ಲಕ್ಕಿಲ್‌ನ ಅಸ್ಮಾಬೀವಿ (32) ಬಂಧಿತ ಆರೋಪಿ. ಆಕೆಯ ಒಳಉಡುಪಿನಲ್ಲಿ 1.769 ಕೆಜಿ ಚಿನ್ನವನ್ನು ಬಚ್ಚಿಟ್ಟಿದ್ದಳು.
ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ದುಬೈನಿಂದ ಬಂದಿಳಿದ ಅಸ್ಮಾಬೀವಿಯನ್ನು ಕೋಝಿಕ್ಕೋಡ್ ಏರ್ ಕಸ್ಟಮ್ಸ್ ಇಂಟಲಿಜೆನ್ಸ್ ಅಧಿಕಾರಿಗಳು ಹಿಡಿದಿದ್ದಾರೆ. 2031 ಗ್ರಾಂ ತೂಕದ ಎರಡು ಚಿನ್ನದ ಪೇಸ್ಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ಚಿನ್ನದ ಮಿಶ್ರಣದಿಂದ 99.68 ಲಕ್ಷ ಮೌಲ್ಯದ 24 ಕ್ಯಾರೆಟ್ ಶುದ್ಧತೆಯ 1.769 ಕೆಜಿ ಚಿನ್ನವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.