Saturday, November 23, 2024
Homeಸುದ್ದಿಬೆಂಗಳೂರಿನ ರೈಲ್ವೇ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಡ್ರಮ್‌ನಲ್ಲಿ ಮಹಿಳೆಯ ಶವ ಪತ್ತೆ - 3 ತಿಂಗಳಲ್ಲಿ 3ನೇ...

ಬೆಂಗಳೂರಿನ ರೈಲ್ವೇ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಡ್ರಮ್‌ನಲ್ಲಿ ಮಹಿಳೆಯ ಶವ ಪತ್ತೆ – 3 ತಿಂಗಳಲ್ಲಿ 3ನೇ ಘಟನೆ

ಬೆಂಗಳೂರಿನ ಬೈಪನಹಳ್ಳಿ ರೈಲು ನಿಲ್ದಾಣದ ಹೊರಗೆ ಬಿಸಾಡಿದ ಡ್ರಮ್‌ನಲ್ಲಿ ಮಹಿಳೆಯ ಶವ ಸಿಕ್ಕಿದ್ದು, ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ.

ಬೆಂಗಳೂರಿನ ಬೈಯಪ್ಪನಹಳ್ಳಿ ರೈಲು ನಿಲ್ದಾಣದ ಬಳಿ ಬಿಸಾಡಿ ಹೋಗಿದ್ದ ಡ್ರಮ್‌ನಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್‌ಎಂವಿಟಿ) ರೈಲು ನಿಲ್ದಾಣದ ಮುಖ್ಯ ಗೇಟ್ ಬಳಿ ಎಸೆದಿದ್ದ ಡ್ರಮ್‌ನಲ್ಲಿ ಮಹಿಳೆಯ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಮಹಿಳೆಯ ವಯಸ್ಸು 32-35 ವರ್ಷ ಎಂದು ಕರ್ನಾಟಕ ಪೊಲೀಸ್ ವರಿಷ್ಠಾಧಿಕಾರಿ (ರೈಲ್ವೆ) ಎಸ್‌ಕೆ ಸೌಮ್ಯಲತಾ ತಿಳಿಸಿದ್ದಾರೆ. ಆಕೆಯನ್ನು ಇನ್ನೂ ಗುರುತಿಸಬೇಕಿದೆ. ಕೊಲೆ ಪ್ರಕರಣ ದಾಖಲಾಗಿದೆ. ಬೆಂಗಳೂರಿನಲ್ಲಿ ಕಳೆದ ವರ್ಷಾಂತ್ಯದಿಂದ ಇದೇ ರೀತಿಯ ಎರಡು ಪ್ರಕರಣಗಳು ವರದಿಯಾಗಿವೆ.

ಡಿಸೆಂಬರ್ ಎರಡನೇ ವಾರದಲ್ಲಿ, ಎಸ್‌ಎಂವಿಟಿ ನಿಲ್ದಾಣದಲ್ಲಿ ಪ್ಯಾಸೆಂಜರ್ ರೈಲಿನ ಕೋಚ್‌ನಲ್ಲಿ ಹಳದಿ ಗೋಣಿಚೀಲದಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿತ್ತು. ಇತರ ಸಾಮಾನುಗಳೊಂದಿಗೆ ಎಸೆದಿದ್ದ ಗೋಣಿ ಚೀಲದಿಂದ ದುರ್ವಾಸನೆ ಬರುತ್ತಿದೆ ಎಂದು ಪ್ರಯಾಣಿಕರೊಬ್ಬರು ದೂರಿದ ನಂತರ ಹೆಚ್ಚು ಕೊಳೆತ ಅವಶೇಷಗಳು ಪತ್ತೆಯಾಗಿವೆ.

ಜನವರಿ 4 ರಂದು, ಯಶವಂತಪುರ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ನಂಬರ್ 1 ರ ಕೊನೆಯಲ್ಲಿ ತ್ಯಜಿಸಲಾದ ನೀಲಿ ಪ್ಲಾಸ್ಟಿಕ್ ಡ್ರಮ್‌ನೊಳಗೆ ಯುವತಿಯ ಕೊಳೆತ ಶವ ರೈಲ್ವೆ ಪೊಲೀಸರಿಗೆ ಕಾಣಸಿಕ್ಕಿತ್ತು. ಮೃತದೇಹವನ್ನು ಆಂಧ್ರಪ್ರದೇಶದ ಮಚಲಿಪಟ್ಟಣಂನಿಂದ ತಂದು ರೈಲು ನಿಲ್ದಾಣದಲ್ಲಿ ಎಸೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಆದರೆ ಎಲ್ಲಾ ಮೂರು ಘಟನೆಗಳಿಗೆ ಸಂಬಂಧವಿದೆಯೇ ಎಂದು ಹೇಳಲು ನಿರಾಕರಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments