ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೋಟ, ಹಂದಟ್ಟು ಶ್ರೀಮತಿ ಮತ್ತು ಶ್ರೀನಿವಾಸ ಭಟ್ ಹಾಗೂ ಕುಟುಂಬದವರ ಪ್ರಾಯೋಜಕತ್ವದಲ್ಲಿ, ಬೆಂಗಳೂರಿನ ಯಕ್ಷದೇಗುಲದ ಸಂಯೋಜನೆಯಲ್ಲಿ 09-03-2023ರಂದು ಕೋಟದ ಹಂದೆ ಶ್ರೀ ವಿಷ್ಣುಮೂರ್ತಿ ಶ್ರೀ ವಿನಾಯಕ ದೇವಸ್ಥಾನದ ಪ್ರಾಂಗಣದಲ್ಲಿ “ಭೀಷ್ಮೋತ್ಪತ್ತಿ” ತಾಳಮದ್ದಲೆ ನಡೆಯಿತು.
ಕಲಾವಿದರಾಗಿ ಸುಜಯೀಂದ್ರ ಹಂದೆ ಎಚ್, ಲಂಬೋದರ ಹೆಗಡೆ, ಶಶಾಂಕ ಆಚಾರ್ಯ, ಸುದೀಪ ಉರಾಳ, ವೈಕುಂಟ ಹೇರ್ಳೆ, ಆದಿತ್ಯ ಹೆಗಡೆ, ಸುಹಾಸ ಕರಬ ಭಾಗವಹಿಸಿದರು.
ಕಾರ್ಯಕ್ರಮದ ಪ್ರಾಯೋಜಕರಾದ ಹಂದಟ್ಟು ಶ್ರೀನಿವಾಸ ಭಟ್‌ರು ಭಾಗವಹಿಸಿದ ಕಲಾವಿದರಿಗೆ ಧನ್ಯವಾದ ಹೇಳಿದರು.
ಕೋಟ ಸುದರ್ಶನ ಉರಾಳ ಕಾರ್ಯಕ್ರಮ ನಿರ್ವಹಿಸಿದರು.