ಯಕ್ಷಗಾನ ಕ್ಷೇತ್ರದಲ್ಲಿ ಹಿಮ್ಮೇಳ ಕಲಾವಿದರಾಗಿ, ಅರ್ಥಧಾರಿಗಳಾಗಿ ಕಲಾ ಸೇವೆ ಮಾಡಿದ ಸಹೋದರತ್ರಯದರಾದ ದಿವಂಗತ ಗಣಪತಿ ಆಚಾರ್ಯ ನೇರೆಂಕಿ, ವಿಠಲಾಚಾರ್ಯ ನೆಲ್ಯಾಡಿ, ಭಾಸ್ಕರ್ ಆಚಾರ್ಯ ಉಪ್ಪಿನಂಗಡಿ ಇವರ ಎರಡನೇ ವರ್ಷದ ಸಂಸ್ಮರಣ ಕಾರ್ಯಕ್ರಮವು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ವಠಾರದಲ್ಲಿ ಜರಗಿತು.
ಸಭೆಯ ಅಧ್ಯಕ್ಷತೆಯನ್ನು ನಿವೃತ್ತ ತಹಶೀಲ್ದಾರ್ ರಾಘವೇಂದ್ರ ಆಚಾರ್ಯ ಬಾರ್ಯ ವಹಿಸಿದ್ದರು.
ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಕಲಾವಿದರ ಸಂಸ್ಮರಣೆಯನ್ನು ಮಾಡಿ ಕಲಾಕ್ಷೇತ್ರದಲ್ಲಿ ಅವರ ಕೊಡುಗೆಗಳನ್ನು ಸ್ಮರಿಸಿದರು.
ಸಂಸ್ಮರಣೆ ಅಂಗವಾಗಿ ಯುವ ಭಾಗವತ ಪದ್ಮನಾಭ ಕುಲಾಲ್ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರಾಮಕುಂಜ ಪದವಿ ಕಾಲೇಜಿನ ಪ್ರಾಂಶುಪಾಲ ಗಣರಾಜ ಕುಂಬಳೆ, ಮಹಾಲಿಂಗೇಶ್ವರ ಭಟ್ ಪೆರಿಯಡ್ಕ, ಸತೀಶ್ ಆಚಾರ್ಯ ಮಾಣಿ, ಸಂಜೀವ ಪಾರೆಂಕಿ, ಗೋಪಾಲ್ ಶೆಟ್ಟಿ ಕಳೆಂಜ, ಹರೀಶ್ ಆಚಾರ್ಯ ಸುರತ್ಕಲ್, ಶ್ರೀಪತಿ ಭಟ್ ಉಪ್ಪಿನಂಗಡಿ ಮೊದಲಾದವರು ಉಪಸ್ಥಿತರಿದ್ದರು.
ಗಂಗಾಧರ ಆಚಾರ್ಯ ನೇರೆಂಕಿ ಸ್ವಾಗತಿಸಿ, ಮುರಳಿಧರ ಆಚಾರ್ಯ ಬಂಟ್ವಾಳ ವಂದಿಸಿದರು . ಹರೀಶ್ ಆಚಾರ್ಯ ಬಾರ್ಯ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಶಿವಭಕ್ತ ವೀರಮಣಿ ತಾಳಮದ್ದಳೆ ಜರಗಿತು. ಭಾಗವತರಾಗಿ ಡಿ.ಕೆ ಆಚಾರ್ಯ ನೇರೆಂಕಿ, ಬಿ.ವೆಂಕಟರಮಣ ರಾವ್ ಉಜಿರೆ, ಪದ್ಮನಾಭ ಕುಲಾಲ್ ಇಲಂತಿಲ ಹಿಮ್ಮೇಳದಲ್ಲಿ ಮೋಹನ ಅಲಂಕಾರ್, ಶ್ರೀಪತಿ ಭಟ್ ಉಪಿನಂಗಡಿ, ಮುರಳೀಧರ ಆಚಾರ್ಯ ಅರ್ಥದಾರಿಗಳಾಗಿ ಗಣರಾಜ ಕುಂಬ್ಳೆ(ಈಶ್ವರ) ದಿವಾಕರ್ ಆಚಾರ್ಯ ಗೇರುಕಟ್ಟೆ,(ವೀರಮಣಿ) ಗುಡ್ಡಪ್ಪ ಬಲ್ಯ, ಗೋಪಾಲ ಶೆಟ್ಟಿ ಕಲೆಂಜ(ಹನುಮಂತ) ಹರೀಶ ಬಾರ್ಯ(ಶ್ರೀ ರಾಮ), ದಿವಾಕರ ಆಚಾರ್ಯ ನೇರೆಂಕಿ (ಶತ್ರುಘ್ನ) ಭಾಗವಹಿಸಿದ್ದರು.
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು
- ಕಾಸರಗೋಡಿನ ಮಸೀದಿ ಪರಿಸರದ ಮಣ್ಣು ತೆಗೆದ ಜೆಸಿಬಿಗೆ 45 ಲಕ್ಷ ದಂಡ; ಬಡ ಕುಟುಂಬ ಸಂಕಷ್ಟದಲ್ಲಿ – ಕಬ್ರಿಸ್ತಾನ್ ಭೂಮಿಯ ಉಸ್ತುವಾರಿ ಮಸೀದಿ ಅಧಿಕಾರಿಗಳಿಗೆ ಶಿಕ್ಷೆ ಇಲ್ಲ
- ಶ್ರೀಧರ ಪಾಂಡಿ ಸಂಸ್ಮರಣಾ ಪ್ರಶಸ್ತಿ ಪ್ರದಾನ – ಭೀಷ್ಮ ವಿಜಯ ತಾಳಮದ್ದಳೆ