ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿದ್ದ ಮಹಿಳೆಯ ಮೇಲೆ ಆಂಬ್ಯುಲೆನ್ಸ್‌ನಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ.
ತನ್ನ ಜೀವನವನ್ನು ಕೊನೆಗೊಳಿಸಲು ವಿಷ ಸೇವಿಸಿದ ಮಹಿಳೆ ಅಪರಿಚಿತನೊಬ್ಬನ ಕೈಯಲ್ಲಿ ಹೆಚ್ಚಿನ ಚಿತ್ರಹಿಂಸೆಯನ್ನು ಅನುಭವಿಸಿದ್ದಾಳೆ.
ತುರ್ತು ಕಾರ್ಯಾಚರಣೆಯಲ್ಲಿ ಚಲಿಸುತ್ತಿದ್ದ ಆಂಬ್ಯುಲೆನ್ಸ್‌ನಲ್ಲಿ ಈ ಭೀಕರ ಘಟನೆ ನಡೆದಿದೆ.
ತ್ರಿಶೂರ್ ಸಮೀಪ ನಡೆದ ಈ ಘಟನೆಯಲ್ಲಿ ಕೊಡುಂಗಲ್ಲೂರು ತಾಲೂಕು ಆಸ್ಪತ್ರೆಯಲ್ಲಿ ಹಂಗಾಮಿ ಸಿಬ್ಬಂದಿಯಾಗಿರುವ ದಯಾಲಾಲ್ ಅವರನ್ನು ಬಂಧಿಸಲಾಗಿದೆ.