
ಫೆಬ್ರವರಿ 11 ಮತ್ತು 12ರಂದು ಉಡುಪಿ ಎಂ.ಜಿ.ಎಂ. ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜ್ಯಮಟ್ಟದ ಪ್ರಥಮ ಯಕ್ಷಗಾನ ಸಮ್ಮೇಳನದ ಪ್ರಚಾರಾರ್ಥವಾಗಿ ಸುಮಾರು 40 ವೃತ್ತಿ ಮೇಳಗಳಲ್ಲಿ ಬ್ಯಾನರನ್ನು ಅಳವಡಿಸಲಾಗುತ್ತಿದ್ದು, ನಿನ್ನೆ (26-01-2023) ಶಿರಿಯಾರದಲ್ಲಿ ಮಂದಾರ್ತಿ ಮೇಳದ ಚೌಕಿಯಲ್ಲಿ ಗಣಪತಿ ದೇವರ ಮುಂಭಾಗದಲ್ಲಿ ಹಾಗೂ ಕಲಾವಿದರ ಸಮ್ಮುಖದಲ್ಲಿ ಬ್ಯಾನರನ್ನು ಅನಾವರಣಗೊಳಿಸಲಾಯಿತು.
ಈ ಸಂದರ್ಭದಲ್ಲಿ ಸಮ್ಮೇಳನದ ಕಾರ್ಯಾಧ್ಯಕ್ಷರಾದ ಡಾ.ಜಿ. ಎಲ್. ಹೆಗಡೆ, ಪ್ರಧಾನ ಸಂಚಾಲಕರಾದ ಪಿ. ಕಿಶನ್ ಹೆಗ್ಡೆ, ಮುರಲಿ ಕಡೆಕಾರ್ ಮತ್ತು ಮೇಳದ ಮೆನೇಜರ್, ನರಾಡಿ ಭೋಜರಾಜ್ ಶೆಟ್ಟಿ ಸಹಿತ ಉಳಿದ ಕಲಾವಿದರು ಉಪಸ್ಥಿತರಿದ್ದರು.
ಕಲಾವಿದರನ್ನು ಉದ್ದೇಶಿಸಿ ಮಾತನಾಡಿದ ಹೆಗಡೆಯವರು ಫೆಬ್ರವರಿ 11 ಮತ್ತು 12ರಂದು ಎಲ್ಲಾ ಕಲಾವಿದರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.