Sunday, January 19, 2025
Homeಸುದ್ದಿಪ್ರಥಮ ಯಕ್ಷಗಾನ ಸಮ್ಮೇಳನಾಧ್ಯಕ್ಷರಿಗೆ ಅಧಿಕೃತ ಆಹ್ವಾನ

ಪ್ರಥಮ ಯಕ್ಷಗಾನ ಸಮ್ಮೇಳನಾಧ್ಯಕ್ಷರಿಗೆ ಅಧಿಕೃತ ಆಹ್ವಾನ

ಫೆಬ್ರವರಿ 11 ಮತ್ತು 12ರಂದು ಉಡುಪಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಪ್ರಥಮ ಸಮಗ್ರ ಯಕ್ಷಗಾನ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾದ ಡಾ.ಎಮ್.ಪ್ರಭಾಕರ ಜೋಶಿಯವರ ಮನೆಗೆ ಸಮ್ಮೇಳನದ ಕಾರ್ಯಾಧ್ಯಕ್ಷರಾದ ಡಾ.ಜಿ. ಎಲ್. ಹೆಗಡೆಯವರು ಭೇಟಿ ನೀಡಿ

ಡಾ. ಎಮ್.ಪ್ರಭಾಕರ ಜೋಶಿ ಮತ್ತು ಶ್ರೀಮತಿ ಸುಚೇತಾ ಜೋಶಿಯವರನ್ನು ಅಭಿನಂದಿಸಿ, ಸುಮಾರು ಒಂದು ಗಂಟೆಗಳ ಕಾಲ ಅವರೊಂದಿಗಿದ್ದು ಎರಡು ದಿನದ ಸಮ್ಮೇಳನದ ರೂಪುರೇಷೆ ಮತ್ತು ಈವರೆಗೆ ಆದ ಬೆಳವಣಿಗೆಯನ್ನು ತಿಳಿಸಿ, ಸುದೀರ್ಘ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಸಮ್ಮೇಳನದ ಸಹ ಸಂಚಾಲಕರಾದ ಮುರಲಿ ಕಡೆಕಾರ್, ನವನೀತ್ ಶೆಟ್ಟಿ ಕದ್ರಿ ಮತ್ತು ನಾರಾಯಣ ಎಮ್. ಹೆಗಡೆ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶ್ರೀ ವಿ.ಸುನಿಲ್ ಕುಮಾರ್‌ ಅವರು ದೂರವಾಣಿಯ ಮೂಲಕ ಡಾ.ಜೋಶಿಯವರನ್ನು ಆಹ್ವಾನಿಸಿ ಅಭಿನಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments