Sunday, September 29, 2024
Homeಸುದ್ದಿವಿಜ್ಞಾನ ಸಮಾವೇಶದಲ್ಲಿ ಸತತ 14 ನೇ ಬಾರಿಗೆ ರಾಜ್ಯ ಮಟ್ಟಕ್ಕೆ ಆಯ್ಕೆ

ವಿಜ್ಞಾನ ಸಮಾವೇಶದಲ್ಲಿ ಸತತ 14 ನೇ ಬಾರಿಗೆ ರಾಜ್ಯ ಮಟ್ಟಕ್ಕೆ ಆಯ್ಕೆ

30ನೇ ಯ ವಿಜ್ಞಾನ ಸಮಾವೇಶದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲದ ವಿದ್ಯಾರ್ಥಿಗಳು ಪ್ರಥಮ ಮತ್ತು ದ್ವಿತೀಯ ಸ್ಥಾನದೊಂದಿಗೆ ಸತತ 14 ನೇ ಬಾರಿಗೆ ರಾಜ್ಯ ಮಟ್ಟಕ್ಕೆ ಆಯ್ಕೆ


30ನೇ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಮಕ್ಕಳ ರಾಷ್ಟ್ರೀಯ ವಿಜ್ಞಾನ ಸಮಾವೇಶ ((National Children’s Science Congress)) ಸ್ಪರ್ಧೆಯು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ದ.ಕ ಜಿಲ್ಲೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೇ, ಭಾರತ ಸರಕಾರ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕರ್ನಾಟಕ ಸರಕಾರ ಇವುಗಳ ಸಹಯೋಗದೊಂದಿಗೆ ಸರಕಾರಿ ಪ್ರೌಢ ಶಾಲೆ ಗುರುವಾಯನಕೆರೆಯಲ್ಲಿ 9 ಜನವರಿ 2023 ರಂದು ನಡೆದಿದ್ದು

ಸೀನಿಯರ್ ವಿಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲದ ವಿದ್ಯಾರ್ಥಿಗಳಾದ ಸಾನ್ವಿ ಎಸ್.ಪಿ 9ನೇ ತರಗತಿ ( ಶ್ರೀ ಸುಂದರ ಪೂಜಾರಿ ಹಾಗೂ ಶ್ರೀಮತಿ ಭವಿತಾ ಪಿ ದಂಪತಿಗಳ ಪುತ್ರಿ) ಹಾಗೂ ಪ್ರತೀಕ್ಷಾ ಆಳ್ವಾ, 9 ನೇ ತರಗತಿ (ಶ್ರೀ ಎ ಸಿ ಚಂದ್ರಶೇಖರ ಆಳ್ವ ಹಾಗೂ ಶ್ರೀಮತಿ ಉಷಾ ಸಿ ಆಳ್ವಾ ದಂಪತಿಗಳ ಪುತ್ರಿ) ಅವರ ತಂಡ ““MULTI PURPOSE SOLAR DRYER”” ಎಂಬ ಶೀರ್ಷಿಕೆಯಡಿ ವಿಜ್ಞಾನ ಯೋಜನೆ ಮಂಡಿಸಿ ಪ್ರಥಮ ಸ್ಥಾನ,

ಅಭಿರಾಮ ಭಟ್ – 10ನೇ ತರಗತಿ (ಶ್ರೀ ನಾರಾಯಣ ಪ್ರಸಾದ್ ಪಿ.ಎಸ್ ಹಾಗೂ ಶ್ರೀಮತಿ ರಮ್ಯ ಕಾವೇರಿ ದಂಪತಿಗಳ ಪುತ್ರ) ಮತ್ತು ಅಜೇಯ ರಾಮ, 9ನೇ ತರಗತಿ (ಶ್ರೀ ಕೇಶವ ಮೂರ್ತಿ ಹಾಗೂ ಶ್ರೀಮತಿ ಗೀತಾ ಲಕ್ಷ್ಮೀ ದಂಪತಿಗಳ ಪುತ್ರ) ಅವರ ತಂಡ ““BEE N NATURE” ಎಂಬ ಶೀರ್ಷಿಕೆಯಡಿ ವಿಜ್ಞಾನ ಯೋಜನೆ ಮಂಡಿಸಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಈ ಸ್ಪರ್ಧೆಯಲ್ಲಿ ಜಿಲ್ಲೆಯಾದ್ಯಂತ ಒಟ್ಟು 36 ತಂಡಗಳು ಭಾಗವಹಿಸಿದ್ದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲದ 2 ತಂಡಗಳು ಕಲಬುರ್ಗಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತವೆ.

ಈ ಮೂಲಕ ಸತತ 14 ನೇ ಬಾರಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಸಾಧನೆ ಸಂಸ್ಥೆಯ ವಿದ್ಯಾರ್ಥಿಗಳದ್ದಾಗಿರುತ್ತದೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments