
ಹತ್ತನೇ ತರಗತಿಯ ಬಾಲಕಿಯೊಬ್ಬಳು ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಆಕೆಯನ್ನು ತಿರುವನಂತಪುರಂನ ವರ್ಕಳ ಸರಕಾರಿ ಮಾದರಿ ಹೈಯರ್ ಸೆಕೆಂಡರಿ ಶಾಲೆಯ ಆರ್ಯ ಕೃಷ್ಣ ಎಂದು ಗುರುತಿಸಲಾಗಿದೆ ವರ್ಕಳದ ಪುತ್ಥೆಂಚಂತಾ ಎಂಬಲ್ಲಿ ಈ ಘಟನೆ ನಡೆದಿದೆ ಆಕೆ ತನ್ನ ಮನೆಯ ಬೆಡ್ ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಆರ್ಯ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಳು. ಕ್ರಿಸ್‌ಮಸ್ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಪಡೆದಿದ್ದಾಳೆ ಮತ್ತು ಶಾಲೆಯಿಂದ ಮನೆಗೆ ಹೋಗುವಾಗ ತುಂಬಾ ದುಃಖಿತಳಾಗಿದ್ದಳು ಎಂದು ವರದಿಗಳು ತಿಳಿಸಿವೆ.
ಆಕೆಯ ಹೆತ್ತವರು ಪಳಯಚಂತ ಜಂಕ್ಷನ್‌ನಲ್ಲಿ ತರಕಾರಿ ಅಂಗಡಿ ಹೊಂದಿದ್ದಾರೆ. ಶಾಲೆಯಿಂದ ತಂದೆಯ ಅಂಗಡಿಗೆ ತೆರಳಿದ್ದ ಬಾಲಕಿ ಸಂಜೆ 5.30ಕ್ಕೆ ಅಣ್ಣನೊಂದಿಗೆ ಮನೆಗೆ ಮರಳಿದ್ದಾಳೆ.
ಬಳಿಕ ಆಕೆಯ ಸಹೋದರ ಅಂಗಡಿಗೆ ತೆರಳಿದ್ದು, ಸಂಜೆ 6 ಗಂಟೆಗೆ ಮತ್ತೊಬ್ಬ ಸಹೋದರಿಯೊಂದಿಗೆ ಮನೆಗೆ ಬಂದಾಗ ಆರ್ಯ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ.
ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಾಗಲೇ ಆಕೆ ಸಾವನ್ನಪ್ಪಿದ್ದಳು.