Sunday, January 19, 2025
Homeಸುದ್ದಿ8 ನೇ ತರಗತಿಯ ಹುಡುಗ ಚಾಕು ತೋರಿಸಿ ಹೆದರಿಸಿ, 6 ನೇ ತರಗತಿಯ ಹುಡುಗಿಯ ಹಣೆಯ...

8 ನೇ ತರಗತಿಯ ಹುಡುಗ ಚಾಕು ತೋರಿಸಿ ಹೆದರಿಸಿ, 6 ನೇ ತರಗತಿಯ ಹುಡುಗಿಯ ಹಣೆಯ ಮೇಲೆ ಸಿಂಧೂರ (ಕುಂಕುಮ ತಿಲಕ) ಇಟ್ಟ! – ಸಿನಿಮಾ ಪ್ರಭಾವ?

ಸಿನಿಮಾಗಳು ಜನರ ಜೀವನಕ್ಕೆ ಮಾರ್ಗದರ್ಶನವನ್ನು ನೀಡಿ ನೀತಿಯನ್ನು ಹೇಳುವಂತಿರಬೇಕು. ಆದರೆ ಈಗಿನ ಸಿನಿಮಾಗಳು ಜನರನ್ನು ತಪ್ಪುದಾರಿಯಲ್ಲಿ ನಡೆಯಲು ಪ್ರಚೋದಿಸುತ್ತವೆ. ಎಷ್ಟೋ ಸಿನಿಮಾಗಳನ್ನು ನೋಡಿ ಅದರಲ್ಲಿ ಬರುವಂತೆ ಅಪರಾಧಗಳನ್ನು ಮಾಡಿದ ಯುವಕರಿದ್ದಾರೆ. ಮಕ್ಕಳೂ ಇದ್ದಾರೆ.

ಇಲ್ಲೊಂದು ಅಂತಹುದೇ ಆಘಾತಕಾರಿ ಘಟನೆಯೊಂದರಲ್ಲಿ, ಬಾಲಿವುಡ್ ಸ್ಕ್ರಿಪ್ಟ್‌ನಿಂದ ನೇರವಾಗಿ ಪ್ರಭಾವಿತನಾದ 8 ನೇ ತರಗತಿಯ ಹುಡುಗನೊಬ್ಬ  6 ನೇ ತರಗತಿಯ ಹುಡುಗಿಗೆ  ಚಾಕು ತೋರಿಸಿ ಹೆದರಿಸಿ ಆಕೆಯ ಹಣೆಗೆ ಬಲವಂತವಾಗಿ ಕುಂಕುಮ ಲೇಪಿಸಿದ್ದಾನೆ. 

ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ವರದಿಯಾಗಿದೆ. 8 ನೇ ತರಗತಿಯ ಹುಡುಗ 6 ನೇ ತರಗತಿಯ ಹುಡುಗಿಯ ಮನೆಗೆ ನುಗ್ಗಿ ಅವಳ ಕುತ್ತಿಗೆಯ ಮೇಲೆ ಚಾಕು ಇಟ್ಟು ಬೆದರಿಸಿ ನಂತರ ಅವಳ ಹಣೆಯ ಮೇಲೆ ಸಿಂಧೂರವನ್ನು ಲೇಪಿಸಿದ್ದಾನೆ. ಹುಡುಗ ತನ್ನ ಸ್ನೇಹಿತನೊಂದಿಗೆ ಅವಳ ಮನೆಯ ಗೋಡೆಯನ್ನು ಹಾರಿ ನಂತರ ಹುಡುಗ 14 ವರ್ಷದ ಹುಡುಗಿಯ ಹಣೆಯ ಮೇಲೆ ಸಿಂಧೂರವನ್ನು ಲೇಪಿಸಿದನು.

ಅವರಿಬ್ಬರೂ ಮನೆಯಲ್ಲಿ ಹುಡುಗಿಯೊಬ್ಬಳೇ ಇರುವ ವೇಳೆಯಲ್ಲಿ ಬಂದಿದ್ದರು. ಹುಡುಗಿ ಕೂಗಿಕೊಂಡಾಗ ಅವರು ಓಡಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಆಕೆಯ ತಂದೆಯ ದೂರಿನ ಮೇರೆಗೆ 16 ವರ್ಷದ ಬಾಲಕನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಠಾಣಾಧಿಕಾರಿ ರವಿಕುಮಾರ್ ರೈ ಮಾತನಾಡಿ, ಬಾಲಕ ತನ್ನ ಸ್ನೇಹಿತನೊಂದಿಗೆ ಬೈಕ್‌ನಲ್ಲಿ ಬಂದಿದ್ದ. ಅವರು ಬರುವಾಗ ಬಾಲಕಿ ನೆಲ ಗುಡಿಸುತ್ತಿದ್ದಳು. ಅವರಲ್ಲಿ ಒಬ್ಬ ಹುಡುಗ ಅವಳ ಗಂಟಲಿನ ಮೇಲೆ ಚಾಕುವನ್ನು ಇರಿಸಿದ ಮತ್ತು ನಂತರ ಸಿಂಧೂರವನ್ನು ಹಣೆಗೆ ಲೇಪಿಸಿದ. ಹುಡುಗಿ ತನ್ನ ತಂದೆ ಕೆಲಸ ಮುಗಿಸಿ ಮನೆಗೆ ಹಿಂದಿರುಗಿದಾಗ ತಂದೆಗೆ ಘಟನೆಯನ್ನು ವಿವರಿಸಿದಳು.

ನಂತರ ಅವರು ದೂರು ದಾಖಲಿಸಿದ್ದಾರೆ. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಪೊಲೀಸರು ಬೈಕ್ ಅನ್ನು ಗುರುತಿಸಿದ್ದಾರೆ. ಬಾಲಕನ ತಂದೆ ಗ್ರಾಮದಲ್ಲಿ ಪಾದರಕ್ಷೆ ಅಂಗಡಿ ಹೊಂದಿದ್ದಾರೆ. ಬಾಲಕನನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಗಿದ್ದು, ಈಗ ಬಾಲಕನನ್ನು ಬಾಲಾಪರಾಧಿಗೃಹದಲ್ಲಿ ಇರಿಸಲಾಗಿದೆ.

“ಈ ಕೃತ್ಯಕ್ಕೆ ಹುಡುಗ ಯಾವುದೇ ಪಶ್ಚಾತ್ತಾಪ ತೋರಿಸಲಿಲ್ಲ ಮತ್ತು ತಾನು ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ ಮತ್ತು ಅವಳನ್ನು ಮದುವೆಯಾಗಲು ಬಯಸುತ್ತೇನೆ” ಎಂದು ಹುಡುಗನ ಹೇಳಿಕೆಯಾಗಿದೆ ಎಂದು ರೈ ಹೇಳಿದರು.

ಕಳೆದ ಮೂರು ತಿಂಗಳಿಂದ ಆ ಹುಡುಗ ಬಾಲಕಿಯನ್ನು ಹಿಂಬಾಲಿಸಿ ಪ್ರಪೋಸ್ ಮಾಡಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದ. ಬಾಲಕಿಯ ಪೋಷಕರು ಆಕೆಯನ್ನು ಬೇರೆ ಶಾಲೆಗೆ ಸೇರಿಸಿದರೂ ಆತ ತನ್ನ ಮನೋಭಾವವನ್ನು ಬದಲಾಯಿಸಲು ಸಿದ್ಧನಿರಲಿಲ್ಲ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments