Sunday, September 29, 2024
Homeಸುದ್ದಿರಾಷ್ಟ್ರಮಟ್ಟದ ಕಲೋತ್ಸವದಲ್ಲಿ ತೃತೀಯ ಪ್ರಶಸ್ತಿ

ರಾಷ್ಟ್ರಮಟ್ಟದ ಕಲೋತ್ಸವದಲ್ಲಿ ತೃತೀಯ ಪ್ರಶಸ್ತಿ

ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿ ತೇಜ ಚಿನ್ಮಯ ಹೊಳ್ಳ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ತೃತೀಯ ಸ್ಥಾನ

ಶಾಲಾ ಶಿಕ್ಷಣ ಸಚಿವಾಲಯ ಭಾರತ ಸರಕಾರ ಹಾಗೂ National Council of Educational Research and Training (NCERT) ನವದೆಹಲಿಯವರು 9 ರಿಂದ 12ನೇ ತರಗತಿ ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕಾಗಿ ಒಡಿಶಾದ ಭುವನೇಶ್ವರದ Regional Institute of Education ಇಲ್ಲಿ ನಡೆಸಿದ ರಾಷ್ಟ್ರಮಟ್ಟದ  “ಕಲೋತ್ಸವ-2022″ರಲ್ಲಿ ಕುಮಾರ ತೇಜ ಚಿನ್ಮಯ ಹೊಳ್ಳ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ರಾಷ್ಟ್ರಮಟ್ಟದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ.

ಇವರನ್ನು ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆಯ ರಾಜ್ಯ ಸಚಿವರುಗಳಾದ ಡಾ. ಸುಭಾಷ್ ಸರ್ಕಾರ್ ಮತ್ತು ಶ್ರೀಮತಿ ಅನ್ನಪೂರ್ಣಾ ದೇವಿ ಹಾಗೂ ಶಿಕ್ಷಣ ಮತ್ತು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾದ ಡಾ. ರಾಜಕುಮಾರ್ ರಂಜನ್ ಸಿಂಘ್ ಇವರುಗಳು ಪುರಸ್ಕಾರ ನೀಡಿ ಗೌರವಿಸಿರುತ್ತಾರೆ.

ಪುತ್ತೂರಿನ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿಯಾಗಿರುವ ಇವರು ಪುತ್ತೂರು ಕೊಂಬೆಟ್ಟು ನಿವಾಸಿ ಶ್ರೀ ಹರೀಶ್ ಹೊಳ್ಳ ಮತ್ತು ಸಂಗೀತ ವಿದುಷಿ ಶ್ರೀಮತಿ ಡಾ. ಸುಚಿತ್ರಾ ಹೊಳ್ಳ ದಂಪತಿಗಳ ಸುಪುತ್ರ ಹಾಗೂ ವಿದ್ವಾನ್ ಟಿ.ಜಿ. ಗೋಪಾಲಕೃಷ್ಣನ್ ಇವರ ಶಿಷ್ಯ. 

ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ, ಪ್ರಶಸ್ತಿ ವಿಜೇತರಾಗಿ ತೇಜ ಚಿನ್ಮಯ ಹೊಳ್ಳ ತನ್ನ ಪೋಷಕರು, ಕಲಿಯುತ್ತಿರುವ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಮತ್ತು ಕರ್ನಾಟಕ ರಾಜ್ಯಕ್ಕೆ ರಾಷ್ಟ್ರಮಟ್ಟದಲ್ಲಿ ಉಲ್ಲೇಖಾರ್ಹ ಗೌರವ ತರುವ ಸಾಧನೆ ಮಾಡಿರುತ್ತಾರೆ. ಮುಂದಕ್ಕೂ ಅತ್ಯುತ್ತಮ ಪ್ರತಿಭೆ ಪ್ರದರ್ಶನ ಇವರಿಂದ ಮೂಡಿ ಬರಲಿ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments