
ಕೊಯಿಲಾಂಡಿ: 19 ವರ್ಷದ ಮೊಮ್ಮಗಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 62 ವರ್ಷದ ಅಜ್ಜನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ಕಪ್ಪಡ್ ಮೂಲದ ಅಬೂಬಕ್ಕರ್.
ಮಲಬಾರ್ ಕಾಲೇಜಿನ ಎರಡನೇ ವರ್ಷದ ಬಿಕಾಂ ವಿದ್ಯಾರ್ಥಿನಿ ರಿಫಾ ಕಳೆದ ಶನಿವಾರ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆರೋಪಿಯು ರಿಫಾ ತಾಯಿಯ ತಂದೆ.
ಅಬೂಬಕರ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಬರೆದಿರುವ ರಿಫಾ ಆತ್ಮಹತ್ಯೆ ಪತ್ರವನ್ನು ಪತ್ತೆ ಹಚ್ಚಿದ ಪೊಲೀಸರು ಪೋಕ್ಸೋ ಕಾಯ್ದೆಯಡಿ ಅಬೂಬಕರ್‌ನನ್ನು ಬಂಧಿಸಿದ್ದಾರೆ.
ಆರೋಪಿಯು ಆಕೆಗೆ 14 ವರ್ಷ ವಯಸ್ಸಿನಿಂದಲೂ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ತಿಳಿದುಬಂದಿದೆ. ತನಿಖೆಯ ಆರಂಭದಲ್ಲಿ ರಿಫಾ ಆತ್ಮಹತ್ಯೆ ಪತ್ರದ ಬಗ್ಗೆ ಸಂಬಂಧಿಕರು ಬಹಿರಂಗಪಡಿಸಿರಲಿಲ್ಲ.
ನಂತರ ಕೊಯಿಲಾಂಡಿ ಸಿಐ ಎನ್ ಸುನೀಲುಮಾರ್ ನೇತೃತ್ವದ ಪೊಲೀಸ್ ತಂಡವು ವಿವರವಾದ ತನಿಖೆಯ ನಂತರ ಆತ್ಮಹತ್ಯೆ ಪತ್ರವನ್ನು ಪತ್ತೆ ಮಾಡಿದೆ.