ಗ್ರೇಟರ್ ನೋಯಿಡಾದಲ್ಲಿ ಯಾರೋ ಪೊದೆಗಳಲ್ಲಿ ಎಸೆದು ಹೋದ ಮಗುವಿಗೆ SHO ಅವರ ಪತ್ನಿ ತನ್ನ ಎದೆಹಾಲುಣಿಸಿ ಮಗುವಿನ ಜೀವ ಉಳಿಸಿದ ಮಾನವೀಯ ಘಟನೆ ನಡೆದಿದೆ. ಹಾಲು ಕುಡಿಯುವ ಮಗು ಚಳಿಯಲ್ಲಿ ಯಾರೋ ಕೈಬಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಗ್ರೇಟರ್ ನೋಯ್ಡಾದಲ್ಲಿ ತನ್ನ ಹೆತ್ತವರು ಚಳಿಯಲ್ಲಿ ಬಿಟ್ಟಿದ್ದ ಶಿಶುವಿಗೆ SHO ಒಬ್ಬರ ಪತ್ನಿ ಜ್ಯೋತಿ ಸಿಂಗ್ ಎಂಬವರು ಎದೆಹಾಲು ಉಣಿಸಿ ಜೀವ ಉಳಿಸಿದ್ದಾರೆ. ಡಿಸೆಂಬರ್ 20 ರಂದು ನಾಲೆಡ್ಜ್ ಪಾರ್ಕ್ ಪ್ರದೇಶದಲ್ಲಿ ಪೊದೆಗಳಲ್ಲಿ ಬಟ್ಟೆಯಲ್ಲಿ ಸುತ್ತಿದ ಮಗು ಪತ್ತೆಯಾಗಿದೆ ಮತ್ತು ಚಳಿಯಿಂದಾಗಿ ಆ ಮಗುವಿನ ಸ್ಥಿತಿ ತುಂಬಾ ಗಂಭೀರವಾಗಿದೆ.
ಮಗುವನ್ನು ಯಾರೋ ಶಾರದಾ ಆಸ್ಪತ್ರೆ ಬಳಿಯ ಪೊದೆಯಲ್ಲಿ ಎಸೆದಿದ್ದಾರೆ. ಮಗುವಿಗೆ ಹಸಿವಾಗಿತ್ತು ನಂತರ ನಾನು ಅವಳಿಗೆ ಎದೆಹಾಲನ್ನು ಕುಡಿಸಿದೆ. ಮಗುವಿನೊಂದಿಗೆ ಯಾರಾದರೂ ಯಾಕೆ ಈ ರೀತಿ ಮಾಡಿದರು ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಎಸ್‌ಎಚ್‌ಒ ಪತ್ನಿ ಜ್ಯೋತಿ ಸಿಂಗ್ ಹೇಳಿದ್ದಾರೆ.
ಯಾರಿಗಾದರೂ ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಸಮಸ್ಯೆಯಿದ್ದರೆ, ಅವರನ್ನು ಅನಾಥಾಶ್ರಮ ಅಥವಾ ಎನ್‌ಜಿಒದಂತಹ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಬೇಕು ಎಂದು ನಾನು ಸಂದೇಶವನ್ನು ಕಳುಹಿಸಲು ಬಯಸುತ್ತೇನೆ ಎಂದುಮಗುವಿಗೆ ಹಾಲುಣಿಸಿದ ಎಸ್‌ಎಚ್‌ಒ ಅವರ ಪತ್ನಿ ಜ್ಯೋತಿ ಸಿಂಗ್ ಹೇಳಿದರು.