Sunday, January 19, 2025
Homeಸುದ್ದಿ'ಯಕ್ಷಪಥದ ಯಾತ್ರಿಕ' - ಕುಂಬಳೆ ಸುಂದರ ರಾವ್ ಅವರ ಆತ್ಮವೃತ್ತಾಂತದ ಕೃತಿ ಬಿಡುಗಡೆ ಮತ್ತು 'ಕೃಷ್ಣ...

‘ಯಕ್ಷಪಥದ ಯಾತ್ರಿಕ’ – ಕುಂಬಳೆ ಸುಂದರ ರಾವ್ ಅವರ ಆತ್ಮವೃತ್ತಾಂತದ ಕೃತಿ ಬಿಡುಗಡೆ ಮತ್ತು ‘ಕೃಷ್ಣ ಸಂಧಾನ’ ತಾಳಮದ್ದಳೆ 

ಇತ್ತೀಚಿಗೆ ನಮ್ಮನ್ನಗಲಿದ ಖ್ಯಾತ ಯಕ್ಷಗಾನ ಕಲಾವಿದ, ಮಾಜಿ ಶಾಸಕ ದಿ| ಕುಂಬಳೆ ಸುಂದರ ರಾವ್ ಅವರ ಆತ್ಮವೃತ್ತಾಂತದ ಕೃತಿಯಾದ  ‘ಯಕ್ಷಪಥದ ಯಾತ್ರಿಕ’ ಎಂಬ ಪುಸ್ತಕವು ಅನಾವರಣಗೊಳ್ಳಲಿದೆ.

ಈ ಆತ್ಮಕಥೆಯ ಪುಸ್ತಕ ಬಿಡುಗಡೆ ಸಮಾರಂಭವು ದಿನಾಂಕ 31.12.2022ರ ಶನಿವಾರ ಸಂಜೆ 4 ಘಂಟೆಗೆ ಸರಿಯಾಗಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಎಲ್.ಸಿ.ಆರ್.ಐ ಸಭಾಂಗಣದಲ್ಲಿ ನಡೆಯಲಿದೆ.

ಹಿರಿಯ ಯಕ್ಷಗಾನ ಕಲಾವಿದರಾದ ಶ್ರೀ ಕೆ. ಗೋವಿಂದ ಭಟ್ ಅವರು ಗ್ರಂಥವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಈ ಕಾರ್ಯಕ್ರಮವು ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗ, ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಮತ್ತು ಕರ್ನಾಟಕ ಸಾಹಿತ್ಯ ಪರಿಷತ್ತು ಬೆಂಗಳೂರು ಇವುಗಳ ಸಹಯೋಗದಲ್ಲಿ ನಡೆಯಲಿದೆ. 

ಸಂತ ಅಲೋಶಿಯಸ್ ಕಾಲೇಜಿನ ರೆಕ್ಟರ್ ರೆ.ಫಾ ಮೆಲ್ವಿನ್ ಜೆ.ಪಿಂಟೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ಪ್ರೊ| ಬಿ.ಎ ವಿವೇಕ ರೈ ಮತ್ತು ಡಾ. ಎಂ. ಪ್ರಭಾಕರ ಜೋಶಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.  ‘ಯಕ್ಷಪಥದ ಯಾತ್ರಿಕ’ ದ ಸಂಪಾದಕರೂ,  ಸಂತ ಅಲೋಶಿಯಸ್ ಕಾಲೇಜಿನ ನಿವೃತ್ತ ಕನ್ನಡ ಪ್ರೊಫೆಸರ್ ಡಾ. ನಾ. ದಾಮೋದರ ಶೆಟ್ಟಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

ಆ ಬಳಿಕ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ದಿ। ಕುಂಬಳೆ ಸುಂದರ ರಾಯರ ಅಚ್ಚುಮೆಚ್ಚಿನ ಪ್ರಸಂಗವಾದ ‘ಕೃಷ್ಣ ಸಂಧಾನ’ ತಾಳಮದ್ದಳೆ ಕಾರ್ಯಕ್ರಮ ನಡೆಯಲಿದೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments